janadhvani

Kannada Online News Paper

ಪೆರುವಾಯಿ: ಸ್ವಾತಂತ್ರ್ಯದ ಹಕ್ಕು ಎಲ್ಲಾ ವಿಭಾಗಕ್ಕೂ ತಲುಪಬೇಕು -ಶ್ರೀ.ರಾಲ್ಫ್ ಡಿಸೋಜ

ವಿಟ್ಲ : ಭವ್ಯ ಭಾರತವು ಬ್ರಿಟಿಷರಿಂದ ಸಂರಕ್ಷಣೆಗೊಂಡು ಎಪ್ಪತ್ತೊಂದು ಸಂವತ್ಸರಗಳು ಸರಿದರೂ ಈಗಲೂ ದೇಶದ ವಿವಿಧೆಡೆಗಳಲ್ಲಿ ಅಲ್ಪಸಂಖ್ಯಾತರಾದ ಹಲವು ಜನರು ಸಂಕಷ್ಟಗೊಳಗಾಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.ವಿಭಜಿಸಿ ಆಡಳಿತ ನಡೆಸುವ ಇಂಗ್ಲಿಷರ ತಂತ್ರವು ಈಗಲೂ ಇಲ್ಲೇ ಉಳಿದಿದ್ದು, ಈ ನಿಟ್ಟಿನಲ್ಲಿ ಭಾರತದಲ್ಲಿ ಬದುಕುವ ಎಲ್ಲಾ ಜಾತಿ-ಧರ್ಮದವರಿಗೂ ದೇಶದ ಸ್ವಾತಂತ್ರ್ಯದ ಹಕ್ಕು ಲಭಿಸಬೇಕು. ಆಡಳಿತ ವರ್ಗವು ಅದರತ್ತ ತಮ್ಮ ಚಿತ್ತ ಹರಿಸಬೇಕೆಂದು ಪೆರುವಾಯಿ ಗ್ರಾಮ ಪಂಚಾಯತ್ ಪ್ರಥಮ ಪ್ರಜೆ ಶ್ರೀ ರಾಲ್ಫ್ ಡಿಸೋಜ ಹೇಳಿದರು.

ಅವರು ಸ್ಥಳೀಯ ಬದ್ರಿಯಾ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಸೆಕೆಂಡರಿ ಮದರಸದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮದ್ರಸಾ ವಠಾರದಲ್ಲಿ ಹಮ್ಮಿಕೊಂಡ ಸ್ವಾತಂತ್ರ್ಯೋತ್ಸವದ ಚಿಂತನೆಗಳು ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡುತ್ತಿದ್ದರು. ಜಮಾಅತ್ ಅಧ್ಯಕ್ಷರಾದ ಮಮ್ಮು ಹಾಜಿರವರು ಧ್ವಜಾರೋಹಣ ಮಾಡಿದರು. ಖತೀಬ್ ಉಸ್ತಾದರಾದ ಮುಹಮ್ಮದ್ ಶರೀಫ್ ಮದನಿರವರು ಪ್ರಾರ್ಥನೆಗೆ ನಾಯಕತ್ವ ನೀಡಿದರು.ಮದ್ರಸಾ ವಿದ್ಯಾರ್ಥಿಗಳಾದ ಮುಹಮ್ಮದ್ ಅನಸ್,ಸಲ್ಮಾನುಲ್ ಫಾರಿಸ್ ಹಾಗೂ ಅರ್ಶಾಕ್ ರವರಿಂದ ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಆಕರ್ಷಣೀಯ ಭಾಷಣಗಳು ನಡೆಯಿತು. ಸುನ್ನೀ ಬಾಲ ಸಂಘ-SBS ಕಾರ್ಯದರ್ಶಿ ಅಬ್ದುಲ್ಲಾ ಅರ್ಶಾಕ್ ಮತ್ತು ಸಂಗವು ರಾಷ್ಟ್ರಗೀತೆ ಹಾಡಿದರು. ಉಪಾಧ್ಯಕ್ಷರಾದ ಅಬೂಬಕರ್ ಸಾಬಿತ್ ದೇಶ ಪ್ರತಿಜ್ಞೆ ಹೇಳಿಕೊಟ್ಟರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಾನರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕೋಶಾಧಿಕಾರಿ ಇಸ್ಮಾಯಿಲ್ ಕಾನ,ಗೌರವಾಧ್ಯಕ್ಷ ಅಬ್ಬಾಸ್ ಹಾಜಿ, ಅಲ್ ನೂರ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಹಸೈನಾರ್ ಹಾಜಿ ಸಹಿತ ಹಲವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಅಬೂಬಕರ್ ಸುನ್ನಿ ಫೈಝಿ ಸ್ವಾಗತ ಭಾಷಣ ಮಾಡಿ, ಕೊನೆಯಲ್ಲಿ ಅಧ್ಯಾಪಕರಾದ ಮುಹಮ್ಮದ್ ಹಾರಿಸ್ ಹಿಮಮಿ ಧನ್ಯವಾದ ಸಲ್ಲಿಸಿದರು. ಮದ್ರಸ ಮುಖ್ಯೋಪಾಧ್ಯಾಯರಾದ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿರವರು ಕಾರ್ಯಕ್ರಮ ನಿರ್ವಹಿಸಿದರು.

error: Content is protected !! Not allowed copy content from janadhvani.com