janadhvani

Kannada Online News Paper

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 22ಕ್ಕೆಈದುಲ್ ಅಝ್‌ಹಾ

ಮಂಗಳೂರು: ಆಗಸ್ಟ್ 21 ಕ್ಕೆ ಅರಫಾ ದಿನ ಮತ್ತು ಆಗಸ್ಟ್ 22 ಕ್ಕೆ ಬಕ್ರೀದ್ ಹಬ್ಬಾಚರಣೆ ಯಾಗಿರುತ್ತದೆ ಎಂದು ದ.ಕ ಜಿಲ್ಲಾ ಮತ್ತು ಉಡುಪಿ ಖಾಝಿಗಳು ಘೋಷಿಸಿದ್ದಾರೆ.

ಕೇರಳದ ಕಾಪಾಡ್ ನಲ್ಲಿ ಇಂದು(ಆ.12) ದುಲ್ ಹಜ್ ತಿಂಗಳ ಪ್ರಥಮ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಆಗಸ್ಟ್ 21 ಮಂಗಳವಾರ ಅರಫಾ ದಿನವಾಗಿದ್ದು,22 ಬುಧವಾರ ಬಕ್ರೀದ್ ಹಬ್ಬಾಚರಣೆ ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿಗಳಾದ ಸಯ್ಯಿದ್ ಕೂರತ್ ತಂಙಳ್ ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಘೋಷಿಸಿದ್ದಾರೆ.

error: Content is protected !! Not allowed copy content from janadhvani.com