ದುಬೈ: ಎಮಿರೇಟ್ಸ್ ಏರ್ಲೈನ್ಸ್ ಮತ್ತು ಫ್ಲೈ ದುಬೈ ವಿಮಾನ ಕಂಪೆನಿಗಳು ರಜಾದಿನಳಲ್ಲಿ ಭೇಟಿ ನೀಡುವ ತಮ್ಮ ಗ್ರಾಹಕರಿಗಾಗಿ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಿಸಿದೆ.
ರಿಯಾಯಿತಿ ದರವು ಭಾರತ ಮತ್ತು ಯುರೋಪ್ ನಡುವೆ ಲಭ್ಯವಾಗಲಿದೆ. ಆಗಸ್ಟ್ 1ಮತ್ತು ಸೆಪ್ಟೆಂಬರ್ 30 ರ ಮಧ್ಯೆ ತಮ್ಮ ಯಾತ್ರೆಯನ್ನು ಕೈಗೊಳ್ಳುವವರಿಗೆ ಮಾತ್ರ ಈ ರಿಯಾಯಿತಿ ಲಭ್ಯವಾಗಲಿದೆ.
ಮುಂಬಯಿಗೆ 460, ಚೆನ್ನೈಗೆ 570, ಹೈದರಾಬಾದ್‌ಗೆ 700 ಮತ್ತು ತಿರುವನಂತಪುರಂಗೆ 800 ದಿರ್ಹಮ್ ಅನುಕ್ರಮವಾಗಿ ನಿಗದಿಪಡಿಸಲಾಗಿದೆ. ಟಿಕೆಟ್ ಅನ್ನು ಆರು ದಿನಗಳಲ್ಲಿ ಕೊಳ್ಳಬೇಕು. ಫ್ಲೈ ದುಬೈ ಹತ್ತು ದಿರ್ಹಂ ವರೆಗೂ ಟಿಕೆಟ್ ನೀಡಲಿದೆ. ಆದರೆ ಬೇಡಿಕೆ ಹೆಚ್ಚಾದಂತೆ ದರವು ಹೆಚ್ಚಾಗಲಿದೆ. ಬಾಕು ಮತ್ತು ಬಟೂಮಿ ಮುಂತಾದ ಪ್ರವಾಸಿ ನಿನೋದ ತಾಣಗಳಿಗೆ ಪ್ಲೈ ದುಬೈನಲ್ಲಿ ರಿಯಾಯಿತಿ ದರ ನೀಡಲಾಗುತ್ತದೆ.