janadhvani

Kannada Online News Paper

ಸೌದಿ ಅರೇಬಿಯಾ: ಐಟಿ ಸೇರಿದಂತೆ ಇನ್ನೂ 11 ವಲಯಗಳಲ್ಲಿ ದೇಶೀಕರಣ

ರಿಯಾದ್: ಸೌದಿ ಅರೇಬಿಯಾದ ಐಟಿ ಸೇರಿದಂತೆ ಇನ್ನೂ 11 ವಲಯಗಳಲ್ಲಿ ದೇಶೀಕರಣವನ್ನು ತೀವ್ರಗೊಳ್ಳಲಾಗುತಿದ್ದು. ಈ ವಲಯಗಳಲ್ಲಿ ಕಾರ್ಯಾಚರಿಸುವ ಭಾರತೀಯರು ಸೇರಿದಂತೆ ಶೀಘ್ರದಲ್ಲೇ ಇತರ ಉದ್ಯೋಗಗಳನ್ನು ಹುಡುಕಬೇಕಾಗಿದೆ.

ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ಯಾಬಿನೆಟ್ ನ ನಿರ್ಧಾರದ ಭಾಗವಾಗಿ ಈ ನಡೆಯನ್ನು ಅನುಸರಿಸಲಾಗುತ್ತಿದೆ. ಉದ್ಯಮ, ಆರೋಗ್ಯ, ಪ್ರವಾಸೋದ್ಯಮ, ಸಾರಿಗೆ, ನಿರ್ಮಾಣ, ಎಂಜಿನಿಯರಿಂಗ್ ಮತ್ತು ಕಾನೂನು ಮುಂತಾದ ವಲಯಗಳಲ್ಲಿ ದೇಶೀಕರಣವನ್ನು ಜಾರಿಗೊಳಿಸಲಾಗುತ್ತಿದೆ.

ಉದ್ಯೋಗ ಮತ್ತು ಸಾಮಾಜಿಕ ಕಲ್ಯಾಣಗಳ ಕಾರ್ಯಾಲಯದ ದೇಶೀಕರಣ ಕಮಿಟಿಯು ಈ ವಿಷಯದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ. ಯೋಜನೆಯು ಹಂತಗಳಾಗಿ ಅನುಷ್ಠಾನಗೊಳ್ಳಲಿದೆ. ಈ ಕುರಿತು ದೇಶೀಯರಿಗೂ ತರಬೇತಿ ನೀಡಲಾಗುವುದು. ಕೆಲಸ ಯೋಜನೆಯ ಅನುಸಾರ 50,000 ಸ್ಥಳೀಯ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.

ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದವರಿಗೆ ತರಬೇತಿ ಪಡೆಯುವ ಸಲುವಾಗಿ ಪಾರ್ಟೈಂ ಕೆಲಸಕ್ಕೆ ಅನುಮತಿ ನೀಡಲಾಗುತ್ತದೆ. ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ, 133 ವೈದ್ಯರಿಗೆ ಮತ್ತು 400 ಔಷಧಿ ಕಂಪೆನಿಗಳ ಸಹಕಾರದೊಂದಿಗೆ 400 ಫಾರ್ಮಸಿಸ್ಟ್‌ಗಳಿಗೆ ಕೆಲಸ ಲಭಿಸಲು ಒಪ್ಪಂದ ಏರ್ಪಡಿಸಲಾಗಿದೆ. 6,000 ಜನರನ್ನು ಕಟ್ಟಡಗಳ ಭದ್ರತಾ ಸಿಬ್ಬಂದಿಯನ್ನಾಗಿ ನೇಮಿಸಲು ಧಾರಣೆ ಮಾಡಲಾಗಿದೆ.

error: Content is protected !! Not allowed copy content from janadhvani.com