janadhvani

Kannada Online News Paper

ಹೆಚ್ಡಿಕೆ ನೇತೃತ್ವದ ಸರಕಾರವನ್ನು ಕೆಡವಲು ಶ್ರಮಿಸಬೇಡಿ

ವಿಜಯಪುರ:ಜೆಡಿಎಸ್‌ ಮುಖಂಡ ಪಿ.ಜಿ.ಆರ್‌.ಸಿಂಧ್ಯಾ, ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲಗೆಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಜಾತಶತ್ರುವಿದ್ದಂತೆ. ಅವನು ತುಂಬಾ ಒಳ್ಳೆಯ ಮನುಷ್ಯ. ಆತನ ನೇತೃತ್ವದ ರಾಜ್ಯ ಸರ್ಕಾರ ಕೆಡವಲು ಕೈ ಹಾಕಬೇಡಿ’ ಎಂದು ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಚಿಂತನ–ಸಾಂಸ್ಕೃತಿಕ ಬಳಗ ಶುಕ್ರವಾರ ಆಯೋಜಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಹಿಂದಿನ ಸರ್ಕಾರದಲ್ಲಿ ನೀವು ಅತ್ಯಂತ ಪ್ರಭಾವಶಾಲಿಯಾಗಿದ್ದವರು. ಎಡವಿದ್ದು ಎಲ್ಲಿ ಎಂಬುದರ ಆತ್ಮಾವಲೋಕನವನ್ನಷ್ಟೇ ಮಾಡಿಕೊಳ್ಳಿ. ನಿಮಗೆ ನಾಯಕತ್ವದ ಶಕ್ತಿಯಿದೆ. ಆದರೆ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕಬೇಡ್ರೀ’ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ಬಿ.ಪಾಟೀಲಗೆ ಸಲಹೆ ನೀಡಿದರು.

‘ಲಿಂಗಾಯತ ಹೋರಾಟದಿಂದ ನೀವು ನಾಯಕರಾಗಿ ಬೆಳೆದಿದ್ದೀರಿ. ಕತ್ತಲೆ ಕೋಣೆಯೊಳಗಿದ್ದ ಬಸವೇಶ್ವರರನ್ನು ಬೆಳಕಿಗೆ ಕರೆತರಲು ಗಟ್ಟಿ ಧ್ವನಿಯಲ್ಲಿ ಹೋರಾಡಿದ್ದೀರಿ. ಧೈರ್ಯವಾಗಿ ಮಾತನಾಡಿ, ಸತ್ಯ ಹೇಳಿದ್ದೀರಿ’ ಎಂದು ಪ್ರಶಂಸಿಸಿದರು.

error: Content is protected !! Not allowed copy content from janadhvani.com