janadhvani

Kannada Online News Paper

ಹಡಗಿನ ಮೂಲಕ ಈ ವರ್ಷ 16,031 ಮಂದಿ ಹಜ್ಜಾಜ್‌ಗಳು- ಜಿದ್ದಾ ತಲುಪಿದ ಪ್ರಥಮ ತಂಡ

ಜಿದ್ದಾ: ಈ ವರ್ಷದ ಪುಣ್ಯ ಹಜ್ ಕರ್ಮಕ್ಕೆ ಇನ್ನು ದಿವಸಗಳು ಮಾತ್ರ ಉಳಿದಿರುವಾಗ, ವಿಶ್ವದ ವಿವಿಧ ಕಡೆಗಳಿಂದ ಹಜ್ಜಾಜ್‌ಗಳ ಆಗಮನವು ಪ್ರಾರಂಭಿಸಿದೆ. ಜಿದ್ದಾದ ಇಸ್ಲಾಮಿಕ್ ಪೋರ್ಟ್ ಮೂಲಕ ಹಡಗಿನ ಮೂಲಕ ಬಂದ ಸುಡಾನ್ ದೇಶದ 1470 ಹಜ್ಜಾಜ್‌ಗಳನ್ನೊಳಗೊಂಡ ತಂಡವು ಜಿದ್ದಾ ತಲುಪಿದೆ.ಈ ವರ್ಷ ಹಡಗಿನ ಮೂಲಕ 16,031 ಮಂದಿ ಹಜ್ಜಾಜ್‌ಗಳು ಜಿದ್ದಾ ಮೂಲಕ ಬಂದು ತಲುಪಲಿದ್ದಾರೆ. ಹಜ್ ಯಾತ್ರಿಕರ ಕ್ಷೇಮ ಪರಿರಕ್ಚಣೆಗಾಗಿ ಜಿದ್ದಾ ಬಂದರಿನಲ್ಲಿ ಆ್ಯಂಬುಲೆನ್ಸ್, ಅಗ್ನಿಶಾಮಕ , ಸುರಕ್ಷಾ ಅಧಿಕಾರಿಗಳು, ಸುರಕ್ಷಾ ಪಟ್ರೋಲ್ ಮುಂತಾದ ಸೌಕರ್ಯಗಳನ್ನು ಏರ್ಪಡಿಸಲಾಗಿದೆ.

ಹಜ್ಜಾಜ್ಗಳನ್ನು ಬರಮಾಡಿಕೊಳ್ಳಲು ಜಿದ್ದಾ ಬಂದರಿನಲ್ಲಿ ಮೂರು ಆಗಮನ ಕೊಠಡಿ, ಕಾಯ್ದಿರುವಿಕೆಗಾಗಿ ಇಪ್ಪತ್ತು ಹಾಲ್‌ಗಳು, ಪ್ರಾಯವಾದವರಿಗಾಗಿ ಟ್ರಾನ್ಪೋರ್ಟೇಷನ್ ಸೌಕರ್ಯಗಳು, ಲಗ್ಗೇಜ್ ಕನ್ ವೇರ್ ಮುಂತಾದವುಗಳನ್ನೂ ಸಜ್ಜೀಕರಿಸಲಾಗಿದೆ.

error: Content is protected !! Not allowed copy content from janadhvani.com