ಕೊಡಗು: ವಿರಾಜಪೆಟೆಯ ಅನ್ವಾರುಲ್ ಹುದಾ ಸೆಂಟರ್ ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದರಸತುಲ್ ಹಿಫ್ಲುಲ್ ಖುರ್ ಆನ್ ವಿದ್ಯಾರ್ಥಿಗಳ ಅಧಿಕೃತ ಸಂಘಟನೆಯಾಗಿ ‘ಅಝ್ ಹಾರುಲ್ ಖುರ್ ಆನ್ ಸ್ಟೂಡೆಂಟ್ ಅಸೋಸಿಯೇಷನ್ (AQSA) ರೂಪಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಉಸ್ತಾದ್ ಶಫೀಖ್ ಸಖಾಫಿ ಕಣ್ಣೂರ್ ಅಧ್ಯಕ್ಷತೆ ವಹಿಸಿದರು, ಸಂಸ್ಥೆಯ ಸಾರಥಿ ಶ್ಯೆಖುನಾ ಅಶ್ರಫ್ ಅಹ್ಸನಿ ಉಸ್ತಾದರು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಷ್ಟರ್ ರವರು ವಿದ್ಯಾರ್ಥಿಗಳಿಗೆ ಹಿತೋಪದೇಶವನ್ನು ನೀಡಿದರು, ಪ್ರಾಧ್ಯಾಪಕರಾದ ಉಸ್ತಾದ್ ಅಬ್ದುರ್ರಹ್ಮಾನ್ ಅಹ್ಸನಿ ಕೊಳಕ್ಕೇರಿ ಹಾಗೂ ಕಮರುದ್ದೀನ್ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ ಹಿತವಚನ ನೀಡಿದರು. ನಂತರ ಪ್ರಸ್ತುತ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಉಸ್ತಾದ್ ಶಫೀಕ್ ಸಖಾಫಿ ಕಣ್ಣೂರ್, ಅಧ್ಯಕ್ಷರಾಗಿ ಜಝೀಲ್ ಇರಿಕ್ಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಫಿ ಅಯ್ಯಂಗೇರಿ, ಕೋಶಾಧಿಕಾರಿಯಾಗಿ ಅನಸ್ ಹುಂಡಿರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಇಸ್ಮಾಯಿಲ್ ಅನ್ವಾರಿ ಅಲ್ ಅಹ್ಸನಿ ಸ್ವಾಗತಿಸಿ ಜಝೀಲ್ ಇರಿಕ್ಕೂರ್ ವಂದಿಸಿದರು.