ವಿಟ್ಲ : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್-ಎಸ್.ಜೆ.ಎಮ್ ವಿಟ್ಲ ರೇಂಜ್ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೇಂದ್ರ ಮದ್ರಸಾ ಒಕ್ಕೆತ್ತೂರು ನೂರುಲ್ ಮದ್ರಸ ಹಾಲಿನಲ್ಲಿ ರೇಂಜ್ ಮುಫತ್ತಿಷರಾದ ಅಬ್ದುಲ್ ಹಮೀದ್ ಮಿಸ್ಬಾಹಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ರೇಂಜ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮದನಿ ಕುಡ್ತಮುಗೇರುರವರ ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿಯವರು ಸ್ವಾಗತಿಸಿದರು.ವಿಟ್ಲ ಟೌನ್ ಮಸ್ಜಿದ್ ಇಮಾಂ ಅಬ್ಬಾಸ್ ಮದನಿಯವರು ಖಿರಾಅತ್ ಪಠಿಸಿದರು.ಸ್ಥಳೀಯ ಖತೀಬರಾದ ಸುಲೈಮಾನ್ ಸಖಾಫಿಯವರು ಸಭೆಯನ್ನು ಉದ್ಘಾಟಿಸಿದರು.
ಪವಿತ್ರ ಹಜ್ಜ್ ಯಾತ್ರೆ ಗೈಯ್ಯುತ್ತಿರುವ ಎಸ್ಎಮ್ಎ ವಿಟ್ಲ ರೀಜ್ಯನಲ್ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಸೆರ್ಕಳರವರನ್ನು ಶಾಲು ಹೊದಿಸಿ ಬೀಳ್ಕೊಡಲಾಯಿತು. ರಿಟೈನಿಂಗ್ ಆಫೀಸರಾಗಿ ಆಗಮಿಸಿದ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪುರವರು ನೂತನ ಸಮಿತಿ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ವಹಿಸಿದ್ದರು.ಸಮಿತಿ ಕೋಶಾಧಿಕಾರಿಯಾಗಿದ್ದ ಅಬ್ದುಲ್ ಖಾದರ್ ಖಲೀಫ ಉಪಸ್ಥಿತರಿದ್ದರು.
ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝ್ಝಾಕ್ ಮುಸ್ಲಿಯಾರ್ ಕೊಡಂಗೆ ಧನ್ಯವಾದ ಸಲ್ಲಿಸಿದರು.
ನೂತನ ಸಾರಥಿಗಳು-2018-2020:
ಅಧ್ಯಕ್ಷರು : ಸುಲೈಮಾನ್ ಸಖಾಫಿ ಬೊಳ್ಮಾರ್ (ಒಕ್ಕೆತ್ತೂರು-ಮದ್ರಸ), ಪ್ರ, ಕಾರ್ಯದರ್ಶಿ : ಅಬ್ದುಲ್ ರಝ್ಝಾಕ್ ಮುಸ್ಲಿಯಾರ್ ಕೊಡಂಗೆ
(ಮಂಗಳಪದವು-ಮದ್ರಸ), ಕೋಶಾಧಿಕಾರಿ : ಅಬ್ದುಲ್ ಮಜೀದ್ ಮದನಿ ಸಾಲೆತ್ತೂರು(ಕುಡ್ತಮುಗೇರು-ಮದ್ರಸ)
ಉಪಸಮಿತಿಗಳು:
1.ಎಕ್ಸಾಮಿನೇಷನ್:-ಉಪಾಧ್ಯಕ್ಷರು : ಮುಹಮ್ಮದ್ ಹನೀಫ್ ಸಅದಿ ಮಂಗಳಪದವು(ನೆಲ್ಲಿಗುಡ್ಡೆ-ಮದ್ರಸ)
ಕಾರ್ಯದರ್ಶಿ : ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ(ಪೆರುವಾಯಿ-ಮದ್ರಸ)
2.ವೆಲ್ಫೇರ್:-ಉಪಾಧ್ಯಕ್ಷರು : ಕಾಸಿಂ ಸಖಾಫಿ ಅಳಕೆಮಜಲು(ಕೊಳಂಬೆ ಮದ್ರಸ)
ಕಾರ್ಯದರ್ಶಿ : ಸಿಎಚ್ ಹನೀಫ್ ಸಖಾಫಿ ಒಕ್ಕೆತ್ತೂರು(ಕಂಬಳಬೆಟ್ಟು-ಮದ್ರಸ)
3.ಟ್ರೈನಿಂಗ್:-ಉಪಾಧ್ಯಕ್ಷರು : ಬಿ.ಎ ಅಬ್ದುಲ್ಲಾ ಮದನಿ ಒಕ್ಕೆತ್ತೂರು(ಕೊಡಂಗೆ-ಮದ್ರಸ)
ಕಾರ್ಯದರ್ಶಿ : ಟಿಎಸ್ ಅಬ್ದುಲ್ ಬಶೀರ್ ಮದನಿ ತಾಳಿತ್ತನೂಜಿ(ಒಕ್ಕೆತ್ತೂರು-ಮದ್ರಸ)
4.ಮಿಷನರಿ:-ಉಪಾಧ್ಯಕ್ಷರು : ಅಬ್ದುಲ್ ರಹ್ಮಾನ್ ಶರಫಿ ಮೂಡಂಬೈಲು(ಮಂಗಳಪದವು-ಮದ್ರಸ)
ಕಾರ್ಯದರ್ಶಿ : ಅಬ್ಬಾಸ್ ಮದನಿ ಕೊಡಂಗಾಯಿ(ಚಂದಳಿಕೆ-ಮದ್ರಸ)
ಮ್ಯಾಗಝಿನ್:-ಉಪಾಧ್ಯಕ್ಷರು : ಝಕರಿಯ್ಯ ಸಖಾಫಿ ಕುಂಬ್ರ(ಕಂಬಳಬೆಟ್ಟು-ಮದ್ರಸ)
ಕಾರ್ಯದರ್ಶಿ : ಮುಹಮ್ಮದ್ ರಫೀಕ್ ಮುಸ್ಲಿಯಾರ್(ಕೊಳಂಬೆ-ಮದ್ರಸ)
ಕಾರ್ಯಕಾರಿ ಸಮಿತಿ ಸದಸ್ಯರು:ಮುಹಮ್ಮದ್ ಹಾರಿಸ್ ಮದನಿ ಶಾಂತಿನಗರ, ಮುಹಮ್ಮದ್ ಹಸನ್ ಮದನಿ ಕುಂಡಡ್ಕ, ಮುಹಮ್ಮದ್ ಅಶ್ರಫ್ ಸಖಾಫಿ ಕಾಂತಡ್ಕ, ಮುಹಮ್ಮದ್ ಹಸನ್ ಸಅದಿ ಉಕ್ಕುಡ, ಅಬ್ದುಲ್ ರಝಾಕ್ ಸಅದಿ ಟಿಪ್ಪುನಗರ, ಇಬ್ರಾಹೀಂ ಅಮಾನಿ ಬಂಡಮುಗೇರು, ಮುಹಮ್ಮದ್ ಹನೀಫ್ ಝೈನಿ ಪೆಲ್ತಡ್ಕ, ಮುಹಮ್ಮದ್ ಹಾರಿಸ್ ಹಿಮಮಿ ಪೆರುವಾಯಿ, ಅಬೂಬಕರ್ ಝೈನಿ ಬೆಳಿಯೂರುಕಟ್ಟೆ, ಅಬ್ದುಲ್ ಹಮೀದ್ ಮದನಿ ಉಕ್ಕುಡ, ಉಮರ್ ಮುಸ್ಲಿಯಾರ್ ಮದಕ
✍🏻 ಎಂಕೆಎಂ ಕಾಮಿಲ್ ಕೊಡಂಗಾಯಿ