ಶಾಂತಿ ,ಸಮ್ರಧ್ದತೆಯ ಪ್ರತೀಕವಾಗಿರುವ ಬಿಳಿ ಬಣ್ಣದ ಪ್ರಾಮುಖ್ಯತೆ ಹಾಗು ಅದರ ಮಹತ್ವದ ಕುರಿತು ಪುಟ್ಟ ಮಕ್ಕಳಲ್ಲಿ ವೈಙಾನಿಕ ಚಿಂತನಾ ತಲಹದಿಯಲ್ಲಿ ಮಕ್ಕಳ ಬುಧ್ದಿ ಶಕ್ತಿಯನ್ನು ವಿಕಾಶಿಸಬಲ್ಲ ವೈಟ್ ಡೇ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು.
ಬಿಳಿ ವಸ್ತ್ರದಾರಿಗಳಾಗಿ ಬಂದ ಪುಟ್ಟ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾದರು.ತರಗತಿಗಳು ಬಿಳಿ ಬಣ್ಣಗಳಿಂದ ಅಲಂಕರಿಸಲಾಗಿತ್ತು ಜೊತೆಗೆ ಮಕ್ಕಳಿಗೆ ಬಿಳಿ ಬಣ್ಣಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನ ಏರ್ಪಡಿಸಿ ಕೊನೆಯಲ್ಲಿ ಮಕ್ಕಳಿಗೆ ಹಾಲನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮನ್-ಶರ್ ಗ್ರೂಪ್ ಚೆಯರ್ಮ್ಯಾನ್ ಹಾಗೂ ಮ್ಯಾನೇಜಿಂಗ್ ಡೈರಕ್ಟರ್ ಸಯ್ಯದ್ ಉಮರ್ ಅಸ್ಸಖಾಫ್,ಮ್ಯಾನೇಜರ್ ಸಯ್ಯದ್ ಆಬಿದ್ ಅಸ್ಸಖಾಫ್,ಕಾರ್ಯದರ್ಶಿ ಸ್ವಾಧಿಕ್ ಮಾಸ್ಟರ್ ಮಲೆಬೆಟ್ಟು,ಅಕಾಡೆಮಿಕ್ ಡೈರಕ್ಟರ್ ವಸಂತ್ ಕುಮಾರ್ ನಿಟ್ಟೆ ಭಾಗವಹಿಸಿ ಶುಭಹಾರೈಸಿದರು.