ಮಲಪ್ಪುರಂ : ಜಾಮಿಆ ಇಹ್ಯಾಉಸ್ಸುನ್ನಃದಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳ ಒಕ್ಕೂಟವಾಗಿದೆ ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಷನ್ (ಕೆ,ಸ್,ಎ).
ಇದರ ವಾರ್ಷಿಕ ಮಹಾ ಸಭೆಯು ಸಯ್ಯಿದ್ ಸಮೀಜ್ ಅಲ್‌ಹೈದರೂಸಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯಿದ್ ಅಝ್ಹರ್ ತಂಙಳ್‌ರವರು ಉದ್ಘಾಟನಾ ಭಾಷಣ ನಡೆಸಿದರು.
2018-19 ರ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಜುನೈದ್ ಅನ್ವಾರಿ ಕೊಡಗು, ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಮಲಾರ್ ಹಾಗೂ ಕೋಶಾಧಿಕಾರಿಯಾಗಿ ಯಾಸೀನ್ ಹಿಮಮಿ ಪುತ್ತೂರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸಯ್ಯಿದ್ ಸಮೀಜ್ ತಂಙಳ್, ಸಯ್ಯಿದ್ ಶರಫುದ್ದೀನ್ ತಂಙಳ್ ಜೊತೆ ಕಾರ್ಯದರ್ಶಿಯಾಗಿ ರಾಶಿದ್ ಅನ್ವಾರಿ ಕೊಡಗು , ಕನ್ವೀನರ್ ಜೌಹರ್ ವೇಣೂರು ಹಾಗೂ ಸಮಿತಿ ಸದಸ್ಯರಾಗಿ ಅಬುತಾಹಿರ್ ಅನ್ವಾರಿ, ಶಬೀರ್, ನೌಶಾದ್ ಹಾಗೂ ಕಮರುದ್ಧೀನ್ ಅನ್ವಾರಿ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಕಮಾಲ್ ಪೊನ್ನಾಣಿ, ರಫೀಖ್ ಮುಈನಿ, ಶಕೀರ್ ಅನ್ವಾರಿ ಉಪಸ್ಥಿತರಿದ್ದರು.