ರಿಯಾದ್: ಈ ವರ್ಷದ ಹಜ್ ಯಾತ್ರೆಯ ನಂತರ ಮದೀನಾಗೆ ಆಗಮಿಸುವ ಹಜ್ ಯಾತ್ರಿಕರನ್ನು ಸ್ವಾಗತಿಸಲು ಮದೀನಾ ಪ್ರದೇಶದ ರಸ್ತೆ ಜಾಲಗಳಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ಮತ್ತು ಕಾರ್ಯಾಚರಣೆಯ ಯೋಜನೆಗಳು ಪೂರ್ಣಗೊಂಡಿವೆ ಎಂದು ಸೌದಿ ಜನರಲ್ ಅಥಾರಿಟಿ ಫಾರ್ ರೋಡ್ಸ್ ತಿಳಿಸಿದೆ. ಹಾಜಿಗಳ ಪ್ರಯಾಣವನ್ನು ಸುರಕ್ಷಿತ ಮತ್ತು ಸುಗಮಗೊಳಿಸಲು ಹಾಗೂ ಅವರ ಪ್ರಯಾಣದ ಅನುಭವವನ್ನು ಸುಧಾರಿಸಲು ವ್ಯಾಪಕವಾದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಮದೀನಾಗೆ ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಅಥಾರಿಟಿಯು ಸಮಗ್ರ ತಪಾಸಣೆ ಮತ್ತು ದುರಸ್ತಿ ಕಾರ್ಯಗಳನ್ನು ಈಗಾಗಲೇ ಪೂರ್ಣಗೊಳಿಸಿದೆ. ಈ ಭಾಗವಾಗಿ 9,06,000 ಕಿಲೋಮೀಟರ್ಗಿಂತಲೂ ಹೆಚ್ಚು ಉದ್ದದ ರಸ್ತೆ ಮೇಲ್ಮೈಗಳನ್ನು ಪರಿಶೀಲಿಸಲಾಗಿದೆ, 4,000 ಮೀಟರ್ಗಿಂತಲೂ ಹೆಚ್ಚು ಕಬ್ಬಿಣ ಮತ್ತು ಕಾಂಕ್ರೀಟ್ ಸುರಕ್ಷತಾ ತಡೆಗೋಡೆಗಳನ್ನು (ಬ್ಯಾರಿಯರ್ಸ್) ಅಳವಡಿಸಲಾಗಿದೆ ಮತ್ತು 3,300 ಮೀಟರ್ಗಿಂತಲೂ ಹೆಚ್ಚು ರಸ್ತೆ ಬೇಲಿಗಳನ್ನು ದುರಸ್ತಿ ಮಾಡಲಾಗಿದೆ.
















ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಬಹರೈನ್: ನೂತನ ಪದಾಧಿಕಾರಿಗಳು
ಇಕ್ಬಾಲ್ ಬಾಳಿಲರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಹಾಲು–ಮೊಸರಿನ ದರ ಏರಿಕೆ: ಪರ್ಯಾಯದ ಹೆಸರಿನಲ್ಲಿ ಕಲಬೆರಕೆಯ ಅಪಾಯ
ಅಲ್ ಮದೀನದಲ್ಲಿ ವಿಜೃಂಭಿಸಿದ ವಿದ್ಯಾರ್ಥಿಗಳ ಸಾಹಿತ್ಯ–ಸಾಂಸ್ಕೃತಿಕ ಸಂಗಮ ‘ಗುಲ್ಶನ್’
ಮೀರಾಸ್ ಎಜು ಗೋಲ್ – ನೂತನ ಕಾರ್ಯನಿರ್ವಾಹಕ ಸಮಿತಿ ಅಸ್ತಿತ್ವಕ್ಕೆ
ಜೈಲು ಕಂಬಿಗಳ ಹಿಂದೆ ನರಳುವ ಜೀವಗಳು: ಕರಾಳ ಮಾದಕವಸ್ತು ಜಾಲದ ಕ್ರೂರ ಮುಖ
ಯೆನೆಪೋಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಉಸ್ತಾದರಿಗೆ ಗೌರವ ಡಾಕ್ಟರೇಟ್
ಇಂದು ಕಾಪುವಿನಲ್ಲಿ ಐತಿಹಾಸಿಕ ಸಮಸ್ತ ತಾತ್ವಿಕ ಸಮಾವೇಶ- ಎಸ್ಸೆಸ್ಸೆಫ್ ಕಾಪು ಡಿವಿಷನ್ ಯಶಸ್ವಿಗೆ ಕರೆ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ