janadhvani

Kannada Online News Paper

ದುಬೈ: ಜಲಸಾರಿಗೆಯನ್ನು ಬಳಸುವವರ ಸಂಖ್ಯೆಯಲ್ಲಿ ಹೆಚ್ಚಳ

ದುಬೈ: ದುಬೈನಲ್ಲಿ ಜಲ ಸಾರಿಗೆಯನ್ನು ಬಳಕೆ ಮಾಡುವ ಜನರ ಸಂಖ್ಯೆಯು ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ಈ ವರ್ಷ 70 ಲಕ್ಷಕ್ಕಿಂತಲೂ ಹೆಚ್ಚು ಜನರು ಜಲಮಾರ್ಗಗಳಲ್ಲಿ ಪ್ರಯಾಣಿಸಿದ್ದಾರೆ. ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಹೊಸ ಸೌಲಭ್ಯಗಳ ಲಭ್ಯತೆಯ ಹೊರತಾಗಿಯೂ, ಪ್ರಯಾಣಿಕರು ಮತ್ತು ನಿವಾಸಿಗಳು ಅಬ್ರಾದಲ್ಲಿನ ಪ್ರಯಾಣವನ್ನೇ ಹೆಚ್ಚಿನವರು ಬಹಳ ಮೆಚ್ಚುತ್ತಾರೆ.
ಕಳೆದ ಆರು ತಿಂಗಳಲ್ಲಿ ಸುಮಾರು 68 ಲಕ್ಷ ಜನರು ಅಬ್ರಾ ಯಾತ್ರೆ ಬಳಸಿದ್ದರು.

ಅನುಕೂಲಕರ ಮತ್ತು ಆಹ್ಲಾದಿಸಬಹುದಾದ ಸೇವೆಗಳನ್ನು ಒದಗಿಸಲಾಗುತ್ತದೆ ಎನ್ನುವ ವಾಸ್ತವೀಕತೆಯನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಳವು ಸೂಚಿಸುತ್ತದೆ ಎಂದು ಪಬ್ಲಿಕ್ ಟ್ರಾನ್ಸ್ ಪೋರ್ಟ್ ಏಜೆನ್ಸಿ ಸಿಇಒ ಅಹ್ಮದ್ ಬೆಹ್ರೂಸಿಯನ್ ಹೇಳಿದರು.ಅಬ್ರಾದ ಜನಪ್ರಿಯತೆಗೆ ಹಳೆಯ ಮತ್ತು ಹೊಸದಾದ ಐತಿಹಾಸಿಕ ಸಂಯೋಜನೆಯೇ ಕಾರಣ ಎಂದವರು ಹೇಳಿದರು.

ವಾಟರ್ ಬಸ್‌ನಲ್ಲಿ ಈ ವರ್ಷ 1,99,430 ಜನರು ಪ್ರಯಾಣಿಸಿದ್ದಾರೆ. ಫೆರ್ರಿ ಪ್ರಯಾಣಿಕರ ಸಂಖ್ಯೆ 1,05,477 ಆಗಿದೆ. ವಾಟರ್ಟಾಕ್ಸಿಯಲ್ಲಿ 10,180 ಮಂದಿ ಪ್ರಯಾಣಿಸಿದ್ದಾರೆ. ದುಬೈ ನ ಜಲಸಾರಿಗೆಯು ಪ್ರವಾಸಿಗರಿಗೆ ಸುಂದರ ನೋಟವನ್ನು ನೀಡುತ್ತವೆ. ಪ್ರವಾಸಿಗರು ದುಬೈನ ಕಡಲತೀರಗಳು, ಗಗನಚುಂಬಿ ಕಟ್ಟಡಗಳು, ಐಷಾರಾಮಿ ಹೋಟೆಲ್ ಗಳು, ಪ್ರಸಿದ್ಧ ಆಕರ್ಷಣೆಗಳು, ಇತ್ಯಾದಿಗಳನ್ನು ವೀಕ್ಷಿಸಲು ಸೌಕರ್ಯ ನೀಡುತ್ತಿದೆ. ಹೀಗಾಗಿ ಜಲಸಾರಿಗೆಯನ್ನು ಬಳಸುವ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ಅಧಿಕಾರಿಗಳ ನಿರೀಕ್ಷೆಯಾಗಿದೆ.

error: Content is protected !! Not allowed copy content from janadhvani.com