ಅಬುಧಾಬಿ: ಇತ್ತಿಹಾದ್ ಗ್ರೂಪ್ ವಿಮಾನದ ಒಳಗಡೆ ವೈದ್ಯಕೀಯ ಸೇವೆಗಳನ್ನು ಆರಂಭಿಸಿದೆ.ಏವಿಯೇಷನ್ ಟ್ರಾನ್ಸ್‌ಪೋರ್ಟ್ ವೈದ್ಯಕೀಯದಲ್ಲಿ ನೈಪುಣ್ಯತೆ ಇರುವ ಇತ್ತಿಹಾದ್‌ನ ನೌಕರರು ವಿಮಾನದಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸಲಿದ್ದಾರೆ.
ಪ್ರಯಾಣಕ್ಕೆ ಮುಂಚಿತವಾಗಿ ಮೆಡಿಕಲ್ ಕ್ಲಿಯರೆನ್ಸ್ ಅವಶ್ಯಕತೆ ಇರುವವರಿಗೆ ಇತ್ತಿಹಾದ್ ಏವಿಯೇಷನ್ ವೈದ್ಯರು ವೈದ್ಯಕೀಯ ಸೇವೆ ನೀಡುವರು.ಎಲ್ಲಾ ವಿಧ ತಪಾಸಣೆ ಮತ್ತು ರೋಗನಿರ್ಣಯವನ್ನು ಪೂರ್ಣಗೊಳಿಸಿದ ನಂತರ, ಪ್ರಯಾಣಿಕರಿಗೆ ಯಾತ್ರಾ ಅನುಮತಿಯನ್ನು ಒಂದು ದಿನದೊಳಗೆ ನೀಡಲಾಗುವುದು. ಅಗತ್ಯವಿದ್ದರೆ ಯಾತ್ರಾವೇಳೆ ದಾದಿಯರ ಸೇವೆಗಳನ್ನು ಸಹ ಇತ್ತಿಹಾದ್ ಖಚಿತಪಡಿಸಲಿದೆ.
ವೈದ್ಯಕೀಯ ಸೇವೆಗಳನ್ನು ನೀಡುವ ವಲಯದಲ್ಲಿನ ಮೊದಲ ವಿಮಾನಯಾನ ಸಂಸ್ಥೆಯಾಗಿದೆ ಇತ್ತಿಹಾದ್ ಎಂದು ವೈದ್ಯಕೀಯ ಸೇವೆ ವಿಭಾಗದ ಉಪಾಧ್ಯಕ್ಷೆ ನಾದಿಯಾ ಬಸ್ತಾಕಿ ಹೇಳಿದ್ದಾರೆ.ಹೊಸ ಸೇವೆಯ ಮೂಲಕ ಸಂಪೂರ್ಣವಾಗಿ ದೈಹಿಕ ಮತ್ತು ಮಾನಸಿಕ ತೊಂದರೆಗಳಿಂದ ಮುಕ್ತಿಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.