janadhvani

Kannada Online News Paper

ವಿದೇಶೀ ಕಾರ್ಮಿಕರಿಗಾಗಿ ಜಾಹೀರಾತು: ಕಾನೂನು ಬಾಹಿರ- ಸೌದಿ ಕಾರ್ಮಿಕ ಸಚಿವಾಲಯ

ರಿಯಾದ್: ವಿದೇಶೀ ಕಾರ್ಮಿಕರನ್ನು ಜಾಹಿರಾತು ಮೂಲಕ ಬರ ಮಾಡಿಕೊಳ್ಳುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸೌದಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಜಾಹಿರಾತು ನೀಡಿ ವಿದೇಶಿಗಳ ನೇಮಕಾತಿ ಮಾಡುವುದು ರಿಕ್ರೂಟ್ಮೆಂಟ್ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸಚಿವಾಲಯ ಹೇಳಿದೆ.

ಸೌದಿಯಲ್ಲಿನ ಟೆಲಿಕಾಂ ಕಂಪೆನಿಯ ಉದ್ಯೋಗ ನೇಮಕಾತಿ ಕುರಿತು ಜೋರ್ಡಾನ್ ಸರ್ಕಾರದ ನೇಮಕಾತಿ ಏಜೆನ್ಸಿಯು ಒಂದು ಜಾಹೀರಾತನ್ನು ಪ್ರಕಟಿಸಿತ್ತು.ಇದರ ವಿರುದ್ದ ಸೌದಿಯ ನಿರುದ್ಯೋಗಿ ಯುವಕರು ಈ ಕುರಿತು ದೂರು ನೀಡಿದ ಹಿನ್ನಲೆಯಲ್ಲಿ ಸೌದಿ ಅರೇಬಿಯಾದಲ್ಲಿನ ನೇಮಕಾತಿ ಬಗ್ಗೆ ಜಾಹೀರಾತು ನೀಡುವಂತಿಲ್ಲ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ವ್ಯಕ್ತ ಪಡಿಸಿದೆ.

ಸೌದಿ ಅರೇಬಿಯಾದಲ್ಲಿನ ನಿರುದ್ಯೋಗವನ್ನು ಕಡಿಮೆ ಗೊಳಿಸುವ ಸಲುವಾಗಿ ಸ್ವದೇಶೀಕರಣ ಮುಂತಾದ ಕ್ರಮಗಳನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ.ಆದಾಗ್ಯೂ, ಇತ್ತೀಚಿನ ಅಂಕಿಯಂಶಗಳ ಪ್ರಕಾರ, ನಿರುದ್ಯೋಗ ಸಂಖ್ಯೆ ಹೆಚ್ಚಾಗಿರುವುದಾಗಿ ವರದಿಯಾಗಿದೆ.

ಸೌದಿ ಅರೇಬಿಯಾದಲ್ಲಿನ ನಿರುದ್ಯೋಗ ದರವು ಈ ವರ್ಷ ಮಾರ್ಚ್ ನಿಂದ 12.9 ಶೇಕಡಾದಷ್ಟಿದೆ.ಇದು ಕಳೆದ ವರ್ಷ 12.8 ರಷ್ಟು ಆಗಿತ್ತು. ಈ ವರ್ಷದ ಮೊದಲ ಅರ್ಧದಲ್ಲಿ ಪುರುಷರ ನಿರುದ್ಯೋಗ ದರವು ಶೇ. 7.6 ಕ್ಕೆ ಏರಿದೆ.

ಅದೇ ವೇಳೆಗೆ, ಕಳೆದ 15 ತಿಂಗಳುಗಳಲ್ಲಿ ವಿದೇಶಿ ಕಾರ್ಮಿಕರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ.ಜನರಲ್ ಸ್ಟ್ಯಾಟಿಸ್ಟಿಕ್ಸ್ ಅಥಾರಿಟಿಯ ಪ್ರಕಾರ ಈ ಅವಧಿಯಲ್ಲಿ 7 ಲಕ್ಷಕ್ಕೂ ಅಧಿಕ ವಿದೇಶಿ ನೌಕರರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ವ್ಯಕ್ತಪಡಿಸಿದೆ.

error: Content is protected !! Not allowed copy content from janadhvani.com