janadhvani

Kannada Online News Paper

ಭಾರತೀಯ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿ ಅಬುಧಾಬಿ ಮಾರ್ಪಟ್ಟಿದೆ

ಅಬುಧಾಬಿ: ಅಬುಧಾಬಿಯು ಭಾರತದ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಡುತ್ತಿದೆ.
ಕಳೆದ ಐದು ತಿಂಗಳಲ್ಲಿ ಸುಮಾರು 1.67 ಲಕ್ಷ ಭಾರತೀಯ ಪ್ರವಾಸಿಗರು ಅಬುಧಾಬಿಗೆ ತೆರಳಿದ್ದಾರೆ.ಹೋಟೆಲ್ ಗಳು ಮತ್ತು ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವವರ ಸಂಖ್ಯೆಯು ಹೆಚ್ಚಾಗಿದೆ. ಪ್ರವಾಸೋದ್ಯಮ ಇಲಾಖೆಯ ಅನುಸಾರ, ಅಬುಧಾಬಿಗೆ ಬರುವ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ 4.9 ಶೇಕಡಾ ಹೆಚ್ಚಾಗಿದೆ.

ಚೀನಾ, ಇಂಗ್ಲೆಂಡ್, ಅಮೆರಿಕಾ ಮತ್ತು ಜರ್ಮನಿ ಮುಂತಾದೆಡೆಯಿಂದಲೂ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದೆ. ಚೀನಾ ಪ್ರವಾಸಿಗರ ಸಂಖ್ಯೆಯು 19.9% ​​ನಷ್ಟು ಹೆಚ್ಚಳವಾಗಿದ್ದು, ಅದು 1,92,500 ನಷ್ಷಾಗಿದೆ. ಅಬುಧಾಬಿಯ 163 ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಅಪಾರ್ಟ್ಮೆಂಟ್‌ಗಳಲ್ಲಿ 31,236 ಕೊಠಡಿಗಳಿವೆ. ಈ ವರ್ಷದ ಮೊದಲ ಐದು ತಿಂಗಳಲ್ಲಿ 20,73,586 ಜನರು ಇಲ್ಲಿ ವಾಸಿಸವಿದ್ದರು.

ಯಾಸ್ ಐಲ್ಯಾಂಡ್ ನಲ್ಲಿ ವಿಶ್ವದರ್ಜೆಯ ವಾರ್ನರ್ ಬ್ರದರ್ಸ್ ವರ್ಲ್ಡ್ ರೆಸಾರ್ಟ್ ಅನ್ನು ಸೆಪ್ಟೆಂಬರ್ 25 ರಂದು ತೆರೆಯಲಾಗುತ್ತದೆ. ಸಾದಿಯಾತ್ ದ್ವೀಪದಲ್ಲಿ ಸ್ಥಾಪಿಸಲಾಗುವ ಆಡಂಬರದ ರೆಸಾರ್ಟ್‌ನ್ನು ನವೆಂಬರ್ನಲ್ಲಿ ತೆರೆಯಲಾಗುತ್ತದೆ.

ಮೆಚ್ಚಿನ ಪರಂಪರೆಯ ತಾಣಗಳು

ದೇಶದ ಸಾಂಸ್ಕೃತಿಕ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಶಕರ ಸಂಖ್ಯೆಯಲ್ಲಿಯೂ ಹಚ್ಚಳ ಉಂಟಾಗಿದೆ. ಅದಲ್ಲದೆ, ವಿಶ್ವದರ್ಜೆಯ ವ್ಯವಹಾರ ವ್ಯವಸ್ಥೆಯನ್ನು ಕೂಡ ತಯಾರು ಗೊಳಿಸಲಾಗಿದೆ.

ಹಚ್ಚ ಹಸಿರಿನ ನಗರವಾದ ಅಲ್ ಐನ್, ಒಂಟೆ ಮೇಳ ನಡೆಯುವ ಅಲ್ ದಫ್ರಾದ ಪಾರಂಪರಿಕ ತಾಣದ ನೋಟಗಳು, ಫೆರಾರಿ ವರ್ಲ್ಡ್, ಲುವ್ರ್ ಮ್ಯೂಸಿಯಂ, ಮರುಭೂಮಿ ಸಫಾರಿ, ಲಿವಾ ಖರ್ಜೂರ ಉತ್ಸವ ಮುಂತಾದವು ಪ್ರವಾಸಿಗಳನ್ನು ಅಬುಧಾಬಿಗೆ ಆಕರ್ಷಿಸುತ್ತಿದೆ.

error: Content is protected !! Not allowed copy content from janadhvani.com