janadhvani

Kannada Online News Paper

ಕಾಂಗ್ರೆಸ್ ನಾಯಕ ನಲಪ್ಪಾಡ್ ಹೇಳಿಕೆ ಖಂಡನೀಯ

ದಾವಣಗೆರೆ ಕ್ಷೇತ್ರದ ಉಪ ಚುನಾವಣೆಯ ಮತಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುಹಮ್ಮದ್ ನಲಪ್ಪಾಡ್ ರವರು ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯಾದ ಜಾಮಿಯಾ ಅರೇಬಿಯಾ ಕಂಜುಲ್ ಇಮಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .

ನಲಪ್ಪಾಡ್ ರವರು ಮಾಧ್ಯಮದ ಎದುರು ಗಡ್ಡ ಟೋಪಿ ಹಾಕಿರುವವರು ಒಳ್ಳೆಯ ಮುಸಲ್ಮಾನರಲ್ಲ ಎಂಬುದಾಗಿ ನಾಲಗೆ ಹರಿಬಿಟ್ಟಿರುವುದು ದೇಶದ ಮುಸ್ಲಿಂ ಸಮುದಾಯಕ್ಕೆ ಮತ್ತು ಇಸ್ಲಾಂ ಧರ್ಮಕ್ಕೆ ಮಾಡಿರುವ ಅವಮಾನ ಹಾಗು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ಗಡ್ಡ ಟೋಪಿ ಧರಿಸಿದವರ ಪ್ರಮುಖ ಪಾತ್ರ ಎಂಬುದನ್ನು ಮರೆತು ವಿವಾದಾಸ್ಪದ ಹೇಳಿಕೆ ನೀಡಿ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಸಮುದಾಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ವಿಶ್ವಾಸವನ್ನು ಕಾಪಾಡಿಕೊಳ್ಳಲು ಪಕ್ಷದ ಉನ್ನತ ನಾಯಕರು ಸದರಿ ವಿವಾದಾಸ್ಪದ ಹೇಳಿಕೆ ಸಂಬಂಧಿಸಿ ಮಧ್ಯಸ್ಥಿಕೆ ವಹಿಸಿ ಇಂತಹ ಅಶಿಸ್ತಿನ ಮುಖಂಡರಿಗೆ ವಜಾ ಮಾಡಬೇಕು ನಲಪ್ಪಾಡ್ ರವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಲಾಗಿದೆ .

ಮುಂದಿನ ದಿನಗಳಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಮನ ನೊಂದು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ್ದಲ್ಲಿ ಪಕ್ಷ ಸೋಲು ಅನುಭವಿಸುವ ಆತಂಕ ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿದೆ ಇದರ ಸಂಪೂರ್ಣ ಜವಾಬ್ದಾರಿ ನಲಪ್ಪಾಡ್ ಮತ್ತು ಉನ್ನತ ನಾಯಕರೇ ಹೊಣೆಯಾಗಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...