janadhvani

Kannada Online News Paper

ಯುಎಇ ಯಿಂದ ಪ್ರಯಾಣ ಬೆಳೆಸುವಾಗ ಈ ವಸ್ತುಗಳು ನಿಮ್ಮ ಲಗೇಜ್ ನಲ್ಲಿರಕೂಡದು

ದುಬೈ: ಯುಎಇಯಿಂದ ಪ್ರಯಾಣಿಸುವಾಗ ಹ್ಯಾಂಡ್ ಬ್ಯಾಗ್ ನಲ್ಲಿ  ಸಾಗಿಸುವುದನ್ನು ನಿರ್ಬಂಧಿಸಲಾದ ವಸ್ತುಗಳ ಪಟ್ಟಿಯನ್ನು ಎಮಿರೇಟ್ಸ್‌ ಏರ್ ಲೈನ್ಸ್ ಬಿಡುಗಡೆ ಮಾಡಿದೆ.
ಸುರಕ್ಷತೆ ಹೆಚ್ಚಿಸುವ ಸಲುವಾಗಿ ಕೈಚೀಲಗಳ ಸ್ಕ್ರೀನಿಂಗ್ ಅನ್ನು ಕೂಡ ಬಿಗಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯುಎಸ್ ಮುಂತಾದೆಡೆಗೆ ಪ್ರಯಾಣಿಸುವವರಿಗೆ ಹ್ಯಾಂಡ್ ಬ್ಯಾಗ್ ಸಂಬಂಧಿಸಿದ  ವಿಶೇಷ ಮಾನದಂಡ ಗಳನ್ನು ಹೊರಡಿಸಲಾಗಿದೆ.
350 ಗ್ರಾಂಗಿಂತ ಹೆಚ್ಚು ತೂಕದ ಹುಡಿಗಳನ್ನು ಕೊಂಡೊಯ್ಯ ಬಾರದು. ಎಲ್ಲಾ ರೀತಿಯ ಹುಡಿಗಳನ್ನು ಕಠಿಣ ತಪಾಸಣೆಗೆ ಒಳಪಡಿಸಲಾಗುತ್ತದೆ. ಆದ್ದರಿಂದ ಅಗತ್ಯವಿಲ್ಲದ ಹುಡಿಗಳನ್ನು ಚೆಕ್ ಇನ್ ಲಗೇಜ್ ನಲ್ಲಿ ಹಾಕುವುದು ಉತ್ತಮವಾಗಿದೆ.ಮಕ್ಕಳ ಅಗತ್ಯಕ್ಕೆ ಹಾಲಿನ ಹುಡಿ ಮತ್ತು ಅಧಿಕೃತ ಚೀಟಿಯೊಂದಿಗಿನ ಔಷಧಿ ಹುಡಿಗಳನ್ನು ಈ ನಿಬಂಧನೆಯಿಂದ ಕೈ ಬಿಡಲಾಗಿದೆ.

ಹೊಸ ಕಾನೂನಿನ ಪ್ರಕಾರ, ಈ ವರ್ಷದ ಜನವರಿಯಿಂದ ಸ್ಮಾರ್ಟ್ ಬ್ಯಾಗ್  ನಿಷೇಧಿಸಲಾಗಿತ್ತು. ಅಂತಹ ಬ್ಯಾಗ್ ಗಳಲ್ಲಿ ಜಿಪಿಎಸ್ ಟ್ರಾಕಿಂಗ್‌ಗೆ ಉಪಯೋಗಿಸುವ ಲಿಥಿಯಂ ಬ್ಯಾಟರಿಗಳು, ಫೋನ್ ಚಾರ್ಜರ್ಗಳು ಮತ್ತು ಎಲೆಕ್ಟ್ರಾನಿಕ್ ಪುಸ್ತಕಗಳು ಬೆಂಕಿ ಹೊತ್ತಲು ಹೇತುವಾದ  ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿತ್ತು.ಮಕ್ಕಳ ಹಾಲು, ನೀರು, ಮತ್ತು ಸೋಯಾ ಹಾಲುಗಳನ್ನು ಮಕ್ಕಳು ಜೊತೆಗಿಲ್ಲದಿದ್ದರೆ ಕೈ ಚೀಲದಲ್ಲಿ ಸಾಗಿಸಲು ಅನುಮತಿ ಇಲ್ಲ.

ಹ್ಯಾಂಡ್ ಅಥವಾ ಲಗೇಜ್‌ನಲ್ಲಿ ನಿಷೇಧಿತ ಸಾಮಾನುಗಳನ್ನು ಕೊಂಡೊಯ್ಯಲು ಅನುಮತಿಸಲಾಗುವುದಿಲ್ಲ

  • ಎಲ್ಲಾ ರೀತಿಯ ಮಾದಕ ಔಷಧಗಳು
  • ಇಸ್ರೇಲ್ ನಿರ್ಮಿತ ಅಥವಾ ಇಸ್ರೇಲಿನ ವ್ಯಾಪಾರ ಮುದ್ರೆ ಅಥವಾ ಇಸ್ರೇಲ್ನ ಲೋಗೋ ಇರುವ ಉತ್ಪನ್ನಗಳು
  • ಆನೆ ಮತ್ತು ಖಡ್ಗ ಮೃಗಗಳ ಕೊಂಬು
  • ಜೂಜಾಟಕ್ಕೆ ಬಳಸಲಾಗುವ ಸಲಕರಣೆಗಳು ಮತ್ತು ಉಪಕರಣಗಳು
  • ಮೂರು ಪದರಗಳಿರುವ ಮೀನು ಬಲೆಗಳು
  • ಕೆತ್ತನೆಗಳು, ಶಿಲ್ಪಗಳು, ಮುದ್ರಿತ ಸಾಮಗ್ರಿಗಳು ಮುಂತಾದವುಗಳ ಒರಿಜಿನಲ್ ಗಳು
  • ಉಪಯೋಗಿಸಿದ ಅಥವಾ ಹಾನಿಗೊಳಗಾಗಿ ನವೀಕರಿಸಿದ ಟೈರ್‌ ಗಳು
  • ಇಸ್ಲಾಮಿನ ಮೌಲ್ಯಗಳಿಗೆ, ಮಾನ್ಯತೆಗೆ ಮತ್ತು ಧಾರ್ಮಿಕ ಭಾವನೆಗಳಿಗೆ ವಿರುದ್ದವಾದ ಮುದ್ರಿತ ಸಾಹಿತ್ಯಗಳು, ತೈಲ ಛಾಯಾಚಿತ್ರಗಳು, ಫೊಟೊಗ್ರಫಿಗಳು, ಛಾಯಾಚಿತ್ರಗಳು, ಕಾರ್ಡುಗಳು, ಪುಸ್ತಕಗಳು, ನಿಯತಕಾಲಿಕೆಗಳು.
  • ದೇಶದಲ್ಲಿ ಆಮದು ಮಾಡವುದು ನಿಷೇಧಿಸಲಾದ ಉತ್ಪನ್ನಗಳು.
  •  ನಕಲಿ ಕರೆನ್ಸಿ

ಇತ್ಯಾದಿಗಳನ್ನು ಕೊಂಡೊಯ್ಯುವುದು ನಿಷೇಧಿಸಲಾಗಿದೆ.

error: Content is protected !! Not allowed copy content from janadhvani.com