janadhvani

Kannada Online News Paper

ಅನುಮತಿ ಇಲ್ಲದೆ ಫೋಟೋ, ವೀಡಿಯೋಗಳನ್ನು ಸೆರೆಹಿಡಿದರೆ ಐದು ಲಕ್ಷ ದಿರ್ಹಂ ವರೆಗೆ ದಂಡ

ದುಬೈ: ವ್ಯಕ್ತಿಯ ಗೌಪ್ಯತೆಗೆ ಕಳಂಕ ಉಂಟಾಗುವ ರೀತಿಯಲ್ಲಿ ಅನುಮತಿ ಇಲ್ಲದೆ ಫೋಟೋ, ವೀಡಿಯೋಗಳನ್ನು ಸೆರೆಹಿಡಿದರೆ ಅವರ ವಿರುದ್ದ ಒಂದೂವರೆ ಲಕ್ಷದಿಂದ ಐದು ಲಕ್ಷ ದಿರ್ಹಂ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲದೆ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕು.ಯಾವುದೇ ವ್ಯಕ್ತಿಯ ಅನುಮತಿ ಪಡೆದ ನಂತರ ಮಾತ್ರ ಯಾರದಾದರೂ ಚಿತ್ರ ಅಥವಾ ವೀಡಿಯೊ ತೆಗೆದುಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

2012ರ ಸೈಬರ್ ಕ್ರೈಮ್ ಫೆಡರಲ್ ಕಾನೂನಿನ ಐದನೇ ಕಲಂ ಪ್ರಕಾರ ಹೊಸ ವಿಜ್ಞಾಪಣೆ ಹೊರಡಿಸಲಾಗಿದೆ. ಆರ್ಟಿಎ ಕಸ್ಟಮರ್ ಕೇರ್ ಸೆಂಟರ್ನಲ್ಲಿ ಅಳುತ್ತಿರುವ ಯುವಕನ ವೀಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡಿದ ನಂತರ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಆ ವೀಡಿಯೊ ವೈರಲ್ ಆಗಿತ್ತು.ಆದರೆ ಈ ಯುವಕ ಭಾರೀ ಮೊತ್ತದ ದಂಡ ವಿಧಿಸಲಾದ ಕಾರು ಟ್ಯಾಕ್ಸಿ ನೌಕರ ಅಲ್ಲ ಎಂದು ದೃಢಪಡಿಸಲಾಗಿದೆ ಮತ್ತು ಆತನ ವಿರುದ್ದ ಯಾವುದೇ ದಂಡ ವಿಧಿಸಲಾಗಿಲ್ಲ ಎಂದು ಆರ್ಟಿಎ ದೃಢಪಡಿಸಿದೆ.

ಟಾಕ್ಸಿ ಡ್ರೈವರಾದ ಬಂಧುವೊಬ್ಬರ ಹೆಸರಲ್ಲಿರುವ 20,000 ದಿರ್ಹಂ ದಂಡದ ಬಗ್ಗೆ ವಿಚಾರಿಸಲು ಆತ ಸೆಂಟರ್‌ಗೆ ಬಂದಿದ್ದ. ವೀಡಿಯೊ ಪ್ರಚಾರ ಪಡಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಈ ಹಿಂದೆ ಆಧಾರರಹಿತ ವೀಡಿಯೋ ಪ್ರಚಾಪಡಿಸಿದ್ದಕ್ಕಾಗಿ 10 ಲಕ್ಷ ದಿರ್ಹಂ ದಂಡವನ್ನು ವಿಧಿಸಲಾಗಿತ್ತು. ರಸ್ತೆ ಅಪಘಾತಗಳು ಮತ್ತು ಅಗ್ನಿ ದುರಂತ ಸಂಭವಿಸಿದಾಗ, ಬಹಳಷ್ಟು ಜನರು ಮೊಬೈಲ್ ಕ್ಯಾಮೆರಾಗಳಲ್ಲಿ ಛಾಯಾಚಿತ್ರ ತೆಗೆಯುತ್ತಾರೆ. ಅಂತಹ ಉಲ್ಲಂಘನೆಗಳ ವಿರುದ್ಧವೂ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

error: Content is protected !! Not allowed copy content from janadhvani.com