ರಿಯಾದ್: ಕಳೆದ ಎರಡು ವರ್ಷಗಳಲ್ಲಿ ಸುಮಾರು 8 ಲಕ್ಷ ವಿದೇಶಿಯರು ಸೌದಿ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಗಲ್ಫ್ ದೇಶಗಳಲ್ಲಿನ ಆರ್ಥಿಕ ಬಿಕ್ಕಟ್ಟು ಮತ್ತು ದೇಶೀಕರಣ ಖಾಸಗಿ ವಲಯದಲ್ಲಿ ವಿದೇಶೀ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲು ಕಾರಣ ಎನ್ನಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಸೌದಿ ಅರೇಬಿಯಾದಲ್ಲಿ ಎಂಟು ಲಕ್ಷಕ್ಕೂ ಅಧಿಕ ವಿದೇಶೀ ಕಾರ್ಮಿಕರು ಕಡಿಮೆ ಗೊಂಡಿರುವುದಾಗಿ ಹೊಸ ಅಂಖ್ಯಾಂಶಗಳಿಂದ ವ್ಯಕ್ತಗೊಂಡಿದೆ.
2018 ರ ಮೊದಲಾರ್ಧದಲ್ಲಿ ಸೌದಿಯ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ವಿದೇಶೀ ನೌಕರರು 77 ಲಕ್ಷ . 2016 ರಲ್ಲಿ ಇದೇ ಅವಧಿಯಲ್ಲಿ, , ವಿದೇಶಿ ಕಾರ್ಮಿಕರ ಸಂಖ್ಯೆಯು 85 ಲಕ್ಷಕ್ಕಿಂತಲೂ ಹೆಚ್ಚಿದ್ದವು. ಎರಡು ವರ್ಷಗಳಲ್ಲಿ, ವಿದೇಶಿ ನೌಕರರ ಸಂಖ್ಯೆಯು 10 ಶೇಕಡಾ ಇಳಿದಿದೆ. ಖಾಸಗಿ ವಲಯದಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡ ವಲಸಿಗರ ಸಂಖ್ಯೆ ಎರಡು ವರ್ಷಗಳಲ್ಲಿ ಹೊಸ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಆಗಮಿಸಿದ ವಲಸಿಗರ ಸಂಖ್ಯೆಗಿಂತಲೂ ಹೆಚ್ಚಾಗಿದೆ.