ಮಂಗಳೂರು: ಕನ್ನಡ ನಾಡಿನ ಪ್ರಮುಖ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಸಂಸ್ಥೆ ಮಂಜನಾಡಿಯ ‘ಅಲ್ ಮದೀನದ ಹಿಬ್ರ್ ಹಾಲ್ ಆಫ್ ಎಕ್ಸಲೆನ್ಸ್’ ಶೈಕ್ಷಣಿಕ ವಿಭಾಗದ ವಿದ್ಯಾರ್ಥಿಗಳ ಸಾಹಿತ್ಯ ಹಬ್ಬ 6 ನೇ ಆವೃತ್ತಿಯ ಗುಲ್ಶನ್ ಕಳೆದ ಆಗಸ್ಟ್ 29,30,31 ದಿನಾಂಕಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಮೊದಲನೆಯ ದಿನ ಸಾಯಂಕಾಲ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಸಯ್ಯಿದ್ ಉವೈಸ್ ಅಸ್ಸಖಾಫ್ ತಂಙಳ್ ದಿಕ್ಸೂಚಿ ಭಾಷಣ ಮಾಡಿದರು. ಗುಲ್ಶನ್ ಚೀಫ್ ಪಾಟ್ರನ್, ಪ್ರಾಧ್ಯಾಪಕ ಅಬ್ದುಸ್ಸಲಾo ಅಹ್ಸನಿ ಉದ್ಘಾಟಿಸಿದರು. ಗುಲ್ಶನ್ ಕಲೋತ್ಸವದ ಕನ್ವೀನರ್ ಜುರೈಜ್ ವಿರಾಜಪೇಟೆ ಸ್ವಾಗತಿಸಿದರು.
ಹಾಜಿ ಎನ್. ಎಸ್. ಕರೀಂ, ಕುಂಞಿ
ಬಾವ ಹಾಜಿ ಕಲ್ಕಟ್ಟ, ಸರ್ಫರಾಜ್ ಅಹಮದ್ ಹಾಗೂ ಸಂಸ್ಥೆಯ ವಿವಿಧ ವಿಭಾಗದ ಅಧ್ಯಾಪಕ ವೃಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಕನ್ನಡ ಸಾಹಿತಿ, ಚಿಂತಕ, ಅಂಕಣಕಾರ ಯೋಗೇಶ್ ಮಾಸ್ಟರ್ ಸಾಹಿತ್ಯ ವಿಷಯ ಮಂಡಿಸಿದರು. ಸಂಜೆ ಕೇರಳದ ಪಾಲಕ್ಕಾಡಿನ ಗಾಯಕರಿಂದ ನಡೆದ “ ಇಶಲ್ ನೈಟ್” ಪ್ರಕೀರ್ತನಾ ಗಾಯನ ಆಕರ್ಷಣೀಯವಾಗಿತ್ತು.
ದ್ವಿತೀಯ ಮತ್ತು ತೃತೀಯ ದಿನಗಳಲ್ಲಿ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ ಹಾಗೂ ಪ್ರತಿಭಾ ಸ್ಪರ್ಧೆಗಳು ನಡೆದವು. ವಿವಿಧ ಭಾಷೆ, ವಿಷಯಗಳಲ್ಲಿ; ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಿಗೆ ‘ಹಿಜ್ರಾ’, ‘ ಇಸ್ರಾ’ ಮತ್ತು ‘ಫತ್ಹ್’ ಮುಂತಾದ ಮೂರು ಗುಂಪಿಗಳಲ್ಲಿ ನೂರಕ್ಕೂ ಕ್ಕೂ ಹೆಚ್ಚು ವಿಷಯಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಭಾನುವಾರ ಸಂಜೆ ಕಲೋತ್ಸವದ ಭಾಗವಾಗಿ ಹಳೆ ವಿದ್ಯಾರ್ಥಿಗಳ ಸಂಗಮ “ಶುರಫಾ” ನಡೆಯಿತು. ಇದರಲ್ಲಿ ಸಂಸ್ಥೆಯಲ್ಲಿ ಈ ಹಿಂದೆ ಸೇವೆಸಲ್ಲಿಸಿದ ಅಧ್ಯಾಪಕರುಗಳಾದ ಯೂನುಸ್ ಅಹ್ಸನಿ, ಮಾಜಿದ್ ಅಹ್ಸನಿ, ಝೈನುಲ್ ಆಬಿದ್ ಸಖಾಫಿ ಮಾಗುಂಡಿ ಭಾಗವಹಿಸಿದರು.
‘ಫತ್ಹ್’ ತಂಡ 674 ಅಂಕಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಹಾಗೂ ಹಿಜ್ರಾ ತಂಡ 650 ಅಂಕಗಳೊಂದಿಗೆ ರನ್ನರ್ಸ್ ಆಫ್ ಗಳಿಸಿತು. ಸೀನಿಯರ್ ವಿಭಾಗದಲ್ಲಿ ಫವಾಝ್ ಪಾನೇಲ ಹಾಗೂ ಜೂನಿಯರ್ ವಿಭಾಗದಲ್ಲಿ ಸಫ್ವಾನ್ ಮಲಾರ್ ವೈಯಕ್ತಿಕ ಚಾಂಪಿಯನ್ ಗಳಾಗಿ ಮೂಡಿಬಂದರು.
ತೀರ್ಪುಗಾರರಾಗಿ ತಸ್ಲೀಮ್ ನೂರಾನಿ ಮೊಂಟೆಪದವು, ಅಮೀನ್ ಹಿಮಮಿ ಸಖಾಫಿ ಕೊಳಕೆ, ಸ್ವಾದಿಕ್ ಮುಈನಿ ಬೆಳಾಲು, ಅಬ್ದುಲ್ಲ ಮಲ್ಹರಿ ಸಖಾಫಿ ಸಹಕರಿಸಿದರು.
ಕಾರ್ಯಕದ ಉದ್ ಘೋಷಕರಾಗಿ ರಾಶಿದ್ ಮದ್ದಡ್ಕ, ಸಮದ್ ಮರ್ಝೂಕಿ ಸಹಕರಿಸಿದರು.
ಭಾನುವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಗುಲ್ಶನ್ ಚೆಯರ್ಮಾನ್ ಅಬ್ದುರ್ರಹಾನ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ಮುಝಮ್ಮಿಲ್ ಲಾಡಿ ಧನ್ಯವಾದವಿತ್ತರು.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)