janadhvani

Kannada Online News Paper

ನ್ಯೂ ಬೀ ಖುರ್’ಆನಿಕ್ ಪ್ರೀ ಸ್ಕೂಲ್: ಕೃಷ್ಣಾಪುರ ಘಟಕ ಉದ್ಘಾಟನೆ

ಸುರತ್ಕಲ್: ಎಳೆಯ ಮಕ್ಕಳ ಕಲಿಕೆಗೆ ಅತ್ಯುತ್ತಮ ರೀತಿಯಲ್ಲಿ ವೈಜ್ಞಾನಿಕವಾದ ಅವಕಾಶವನ್ನು ಒದಗಿಸುತ್ತಿರುವ ನ್ಯೂ ಬೀ ಪ್ರೀ ಸ್ಕೂಲಿನ ಕೃಷ್ಣಾಪುರ ಘಟಕದ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಕೃಷ್ಣಾಪುರ 7ನೇ ಬ್ಲಾಕ್ ರಯ್ಯಾನ್ ಗಾರ್ಡನ್ನಲ್ಲಿ ನಡೆಯಿತು.ಶಾಲಾ ಕಟ್ಟಡದ ಉದ್ಘಾಟನೆಯನ್ನು ಮಾಜಿ ಶಾಸಕ ಜನಾಬ್ ಬಿ.ಎ. ಮೊಹಿದಿನ್ ಬಾವರವರು ನಿರ್ವಹಿಸಿದರು.ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಜನಾಬ್ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಅಧ್ಯಕ್ಷತೆ ವಹಿಸಿದರು. ಕೃಷ್ಣಾಪುರ ಗೌರವಾನ್ವಿತ ಖಾಝಿ ಅಲ್ಹಾಜ್ ಇ.ಕೆ. ಇಬ್ರಾಹಿಂ ಮದನಿ ಸಮಾರಂಭವನ್ನು ಉದ್ಘಾಟಿಸಿದರು.ಮಿಸ್ಬಾಹ್ ವುಮೆನ್ಸ್ ಕಾಲೇಜ್ ಇದರ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ. ಝೈನೀ ಕಾಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾಜಿ ಎಚ್.ಐ. ಮುಹಮ್ಮದ್ ಮುಸ್ಲಿಯಾರ್ ಹಂಡೇಲ್, ಕೃಷ್ಣಾಪುರ ಬದ್ರಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ. ನಝೀರ್ , ಬೈಕಂಪಾಡಿ ಮುಹ್ಯಿದ್ದೀನ್ ಜುಮಾ ಮಸೀದಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಕೆ.ಸಿ.ಎಫ್. ಅಂತರಾಷ್ಟ್ರೀಯ ನಾಯಕ ಫಾರೂಕ್ ಕಾಟಿಪಳ್ಳ, ಕೃಷ್ಣಾಪುರ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಫಾರೂಕ್ ಸಖಾಫಿ, ಬದ್ರುಲ್ ಹುದಾ ಖತೀಬ್ ಅಶ್ರಫ್ ಸಖಾಫಿ ಸಮಾರಂಭಕ್ಕೆ ಶುಭ ಹಾರೈಸಿದರು.

ಸಯ್ಯಿದ್ ಅಲವೀ ಅಲ್ ಬುಖಾರಿ ಹೊನ್ನಾವರ (ಕರ್ಕೀ ತಂಙಳ್), ಸಯ್ಯಿದ್ ಯಾಸೀನ್ ಸಖಾಫಿ ಅಲ್ ಐದರೋಸ್ ತಂಙಳ್ ಕಾಸರಗೋಡು ಇವರು ಜೇನಿನಲ್ಲಿ ‘ಅಲಿಫ್’ ಎಂಬ ಅಕ್ಷರವನ್ನು ಬರೆಸುವ ಮೂಲಕ ಪುಟಾಣಿ ಮಕ್ಕಳಿಗೆ ಜ್ಞಾನದ ಬಾಗಿಲನ್ನು ತೆರೆದುಕೊಟ್ಟರು.
ಮನ್ಶರ್ ಸ್ಕೂಲ್ ಪ್ರಿನ್ಸಿಪಾಲ್ ಆಸಿಫ್ ಫಾಳಿಲಿ MSC, MA, B.Ed ಹಾಗೂ ನ್ಯೂಬೀ ಕೋ-ಆಡಿನೇಟರ್ ನೌಫಲ್ ಕಕ್ಕಿಂಜೆ ಪೋಷಕರಿಗೆ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಕೆ.ಅಬ್ದುಲ್ ಖಾದರ್ ಸುರಿಬೈಲ್, ಲುಖ್ಮಾನಿಯಾ ಇಸ್ಮಾಯಿಲ್ ಮುಸ್ಲಿಯಾರ್ ಕೃಷ್ಣಾಪುರ, ಕುಸುಮ ಬಾಲ ಮಾಸಿಕ ಸಂಪಾದಕ ಹಸನ್ ಝುಹ್ರಿ ಮಂಗಳಪೇಟೆ, ಕೆ.ಸಿ.ಎಫ್ ನಾಯಕ ಸಾದಿಕ್ ಕಾಟಿಪಳ್ಳ, ಶಾಫಿ ಮದನಿ ಕಂಬಳಬೆಟ್ಟು, ಜಿಲ್ಲಾ ವಕ್ಫ್ ಸದಸ್ಯ ಹಸನಬ್ಬ ಮಂಗಳಪೇಟೆ, ಗುತ್ತೆಕ್ಕಾಡ್ ಖತೀಬ್ ಫಾರೂಕ್ ಸಖಾಫಿ, ಕೆರೆಬಳಿ ಖತೀಬ್ ಉಸ್ಮಾನ್ ಫಾಳಿಲಿ, ಅಬೂಬಕರ್ ಸಿದ್ದೀಕ್ ಹಿಮಮಿ ಸುರಿಬೈಲ್, ಬದ್ರಿಯಾ ಕೇಂದ್ರ ಮದ್ರಸ ಅಧ್ಯಕ್ಷ ಫಾರೂಕ್, ಕೋಶಾಧಿಕಾರಿ ಹಸನಬ್ಬ, ಅಬೂ ಬಲ್ಕೀಸ್ ಸ್ವಾದಿಕ್ ಹಂಡೇಲ್ ಮುಂತಾದವರು ಪಾಲ್ಗೊಂಡರು.
ನೂರಾರು ಪೋಷಕರು ಹಾಗೂ ಸ್ಥಳೀಯರು ಕಾರ್ಯಕ್ರಮದ ಉದ್ಘಾಟನಾ ಸಮಾವೇಶದಲ್ಲಿ ಭಾಗವಹಿಸಿದರು.

ಕೃಷ್ಣಾಪುರ ನ್ಯೂಬೀ ಪ್ರೀ ಸ್ಕೂಲ್ ಡೈರೆಕ್ಟರ್ ಕೆ.ಕೆ. ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ವರದಿ: ತ್ವಾಹ ಮಿಸ್ಬಾಹ್ ಕೃಷ್ಣಾಪುರ

error: Content is protected !! Not allowed copy content from janadhvani.com