ದುಬೈ: ಕೆಸಿಎಫ್ ದುಬೈ ಸೌತ್ ಝೋನ್ ಪ್ರತಿ ವರ್ಷ ನಡೆಸುತ್ತಿರುವ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ನ 2025 ನೇ ಸಾಲಿನ ಕಾರ್ಯಕ್ರಮದ ಸ್ವಾಗತ ಸಮಿತಿಯ ರಚನೆಯು ದುಬೈ ಬಿಸಿನೆಸ್ ಬೇ ಯಲ್ಲಿರುವ ಬೇ ಬೈಟ್ಸ್ ಹೋಟೇಲಿನಲ್ಲಿ ಆಗಸ್ಟ್ .3 ಭಾನುವಾರದಂದು ನಡೆಯಿತು.
ಸಭೆಯನ್ನುಧ್ಧೇಶಿಸಿ ಮಾತನಾಡಿದ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿಯವರು ಪ್ರವಾದಿ (ಸ.ಅ) ರವರ 1500 ನೇ ಜನ್ಮ ದಿನಾಚರಣೆಯನ್ನು ದುಬೈ ಸೌತ್ ಝೋನ್ ಈ ಬಾರಿ ವಿಜೃಂಭಣೆಯಿಂದ ಆಚರಿಸಲಿದೆ. ಪ್ರವಾದಿ ಕೀರ್ತನೆಗಳು ಮತ್ತು ಮದ್ಹ್ ಪ್ರಭಾಷಣಗಳನ್ನೊಳಗೊಂಡ ಪ್ರಸ್ತುತ ಗ್ರಾಂಡ್ ಮಿಲಾದ್ ಕಾನ್ಫರೆನ್ಸ್-2025, ಸೆಪ್ಟೆಂಬರ್ 21 ಭಾನುವಾರ, ದುಬೈ ಊದ್ ಮೇತ ಪಾಕಿಸ್ತಾನ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಕೈಜೊಡಿಸಬೇಕೆಂದು ಕರೆ ನೀಡಿದರು.
ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಇಕ್ಬಾಲ್ ಸಿಧ್ಧಕಟ್ಟೆ, ವರ್ಕಿಂಗ್ ಚೇರ್ಮ್ಯಾನ್ ನಝೀರ್ ಹಾಜಿ ಕೆಮ್ಮಾರ, ಕನ್ವೀನರ್ ರಜಬ್ ಉಚ್ಚಿಲ, ವರ್ಕಿಂಗ್ ಕನ್ವೀನರ್ ಆಸಿಫ್ ಇಂದ್ರಾಜೆ, ಫಿನಾನ್ಶ್ಯಲ್ ಚೇರ್ಮ್ಯಾನ್ ಇಲ್ಯಾಸ್ ಮೂಳೂರು, ಫಿನಾನ್ಸ್ ಕನ್ವೀನರ್ ರವೂಫ್ ಸಾಗರ, ಅಶ್ಫಾಕ್ ಕೊಡಗು ಹಾಗೂ ಖಾದರ್ ಕಯ್ಯೂರು ಸೇರದಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೆಸಿಎಫ್ ದುಬೈ ಸೌತ್ ಝೊನ್ ಅಧ್ಯಕ್ಷ ಇಲ್ಯಾಸ್ ಮದನಿ ಬರ್ಷಾ ವಹಿಸಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಸಖಾಫಿ ಉಧ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಾಳಾಗಿ ಕೆಸಿಎಫ್ ಸಂಘಟನಾ ನಾಯಕರು ಗಳಾದ ರಜಬ್ ಉಚ್ಚಿಲ, ಹಮೀದ್ ಹಾಜಿ ಸ್ಟಾರ್ ಲಿಂಕ್, ಇಲ್ಯಾಸ್ ಮೂಳೂರು, ರವೂಫ್ ಸಾಗರ, ನವಾಝ್ ಹಾಜಿ ಕೋಟೆಕಾರ್, ನಝೀರ್ ಹಾಜಿ, ಇಕ್ಬಾಲ್ ಹಾಜಿ ಸಿಧ್ಧಕಟ್ಟೆ ಸೇರಿದಂತೆ, ಝೋನ್, ಸೆಕ್ಟರ್ ಹಾಗೂ ಶಾಖೆಯ ನಾಯಕರು ಭಾಗವಹಿಸಿದ್ದರು.
ಝೋನ್ ಕಾರ್ಯದರ್ಶಿ ಮನ್ಸೂರ್ ಹರೇಕಳ ಸ್ವಾಗತಿಸಿದರು, ರಫೀಕ್ ಕಲ್ಲಡ್ಕ ವಂದಿಸಿದರು. ಅಝೀಝ್ ಅಹ್ಸನಿ ಕಾರ್ಯಕ್ರಮವನ್ನು ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ