janadhvani

Kannada Online News Paper

ದೇಶೀಕರಣ: ಕುವೈಟ್ ತೈಲ ಕಂಪನಿಗಳಿಂದ ವಿದೇಶೀ ಕಾರ್ಮಿಕರು ಔಟ್

ಕುವೈತ್ ಸಿಟಿ: ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ (ಕೆಪಿಸಿ) ವಿದೇಶಿಯರನ್ನು ಸೇವೆಯಿಂದ ಹೊರಗಿಡಲು ನಿರ್ಧರಿಸಿದೆ.ಕುವೈಟ್ ಆಯಿಲ್ ಕಂಪೆನಿ, ಕುವೈಟ್ ನ್ಯಾಶನಲ್ ಪೆಟ್ರೋಲಿಯಂ ಕಂಪೆನಿ, ಕುವೈಟ್ ಪೆಟ್ರೋಕೆಮಿಕಲ್ ಇಂಡಸ್ಟ್ರಿಸ್ ಕಂಪೆನಿ, ಕುವೈಟ್ ಆಯಿಲ್ ಟಾಂಕೆರ್ಸ್ ಕಂಪನಿ, ಕುವೈಟ್ ಗಲ್ಫ್ ಆಯಿಲ್ ಕಂಪನಿ ಮತ್ತು ಕುವೈಟ್ ಫಾರಿನ್ ಆಯಿಲ್ ಎಕ್ಸ್ ಪ್ಲೋರೇಶನ್ ಕಂಪನಿಗೂ ಇದು ಅನ್ವಯಿಸುತ್ತದೆ.

ಪ್ರಸ್ತುತ ದೇಶದಲ್ಲಿರುವ ವಲಸಿಗರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಾಗಿದೆ ಇದರ ಗುರಿ.ಈ ಕುರಿತು ಅಧಿಸೂಚನೆಯನ್ನು ನೀಡಲಾಗಿದೆ. ವಿದೇಶಿ ಪ್ರಜೆಗಳ ನಿವೃತ್ತಿ ಪ್ರಯೋಜನಗಳನ್ನು ಲೆಕ್ಕಾಚಾರ ಮಾಡಲು ಕೂಡ ಸೂಚಿಸಲಾಗಿದೆ.

ಯೂತ್ ಅಂಡ್ ಸ್ಪೋರ್ಟ್ಸ್ (ಐಎಲ್ಓ), ಆರೋಗ್ಯ ಇಲಾಖೆಯ 13 ನೇ ಸಾರ್ವಜನಿಕ ಪ್ರಾಧಿಕಾರದಲ್ಲಿ, ಖಾತೆಯ ಸಚಿವ ಮುಹಮ್ಮದ್ ಅಲ್-ಜಾಬ್ರಿ ಮಾತನಾಡಿ, ದೇಶೀ ಯುವಕರಿಗೆ ಉತ್ತಮ ಜೀವನ ಪರಿಸ್ಥಿತಿ ಮತ್ತು ಕೆಲಸಗಳನ್ನು ಸೃಷ್ಟಿಸುವುದು ಅಗತ್ಯ ಎಂದು ಹೇಳಿದರು.2018- 2019 ರ ಆರ್ಥಿಕ ವರ್ಷದಲ್ಲಿ ದೇಶೀ ಯುವಕರನ್ನು ಕೇಂದ್ರೀಕರಿಸಿ 52 ಯೋಜನೆಗಳಿಗೆ ರೂಪಕಲ್ಪನೆ ನೀಡಿರುವುದಾಗಿ ಸಚಿವರು ಹೇಳಿದರು.

error: Content is protected !! Not allowed copy content from janadhvani.com