janadhvani

Kannada Online News Paper

ಝಾಯಿದ್-ಗಾಂಧಿ ಡಿಜಿಟಲ್ ಮ್ಯೂಸಿಯಂ: ಅಬುಧಾಬಿಯಲ್ಲಿ ಸ್ಥಾಪನೆ

ಅಬುಧಾಬಿ: ಭಾರತ ಮತ್ತು ಯುಎಇ ನಡುವಿನ ಸೌಹಾರ್ದವನ್ನು ಶಕ್ತಗೊಳಿಸಿ ಎರಡೂ ದೇಶಗಳ ರಾಷ್ಟ್ರಪಿತರ ಸ್ಮರಣೆಗಳಿಗೆ ಹೊಸ ಮುಖವನ್ನು ನೀಡುವ ಸಲುವಾಗಿ ಝಾಯಿದ್-ಗಾಂಧಿ ಡಿಜಿಟಲ್ ಮ್ಯೂಸಿಯಂ ಅನ್ನು ಅಬುಧಾಬಿಯಲ್ಲಿ ಸ್ಥಾಪಿಸಲಾಗುವುದು.

ಭಾರತಕ್ಕೆ ಭೇಟಿ ನೀಡಿರುವ ಯುಎಇ ವಿದೇಶಾಂಗ ಅಂತರಾಷ್ಟ್ರೀಯ ಸಹಕಾರಿ ಸಚಿವ ಶೈಖ್ ಅಬ್ದುಲ್ಲಾ ಬಿನ್ ಝಾಯಿದ್ ಆಲ್ ನಹ್ಯಾನ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಜೊತೆಯಲ್ಲಿ ಈ ಕುರಿತು ಘೋಷಣೆ ಮಾಡಿದ್ದಾರೆ. ಝಾಯಿದ್ ವರ್ಷಾಚರಣೆಯ ಭಾಗವಾಗಿ ಅಬುಧಾಬಿದಲ್ಲಿ ಡಿಜಿಟಲ್ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು.

ಶೈಖ್ ಝಾಹಿದ್‌ ಅವರ 100 ನೇ ಜನ್ಮ ವಾರ್ಷಿಕೋತ್ಸವ ಮತ್ತು ಮಹಾತ್ಮಾ ಗಾಂಧಿಯವರ 150 ನೇ ಜನ್ಮದಿನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಇಬ್ಬರು ನಾಯಕರ ದಾರ್ಶನಿಕತೆ ಮತ್ತು ಜೀವನಚರಿತ್ರೆಯನ್ನು ವಿಶ್ವಕ್ಕೆ ಪ್ರಚುರಪಡಿಸಲು ಯುಎಇ ಮತ್ತು ಭಾರತವು ಯೋಜಿಸುತ್ತಿದೆ.

ಈ ಮ್ಯೂಸಿಯಂ ಶೈಖ್ ಝಾಯಿದ್ ಮತ್ತು ಮಹಾತ್ಮ ಗಾಂಧಿಯವರ ಅಪರೂಪದ ಚಿತ್ರಗಳು ಮತ್ತು ಅವರ ಜೀವನಶೈಲಿ, ತತ್ವಗಳನ್ನು ಪ್ರತಿಫಲಿಸುವ ಅಂಶಗಳನ್ನು ಒಳಗೊಂಡಿರುತ್ತದೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವೀಕ್ಷಕರೊಂದಿಗೆ ಸಂವಹನ ಮಾಡುವ ರೀತಿಯಲ್ಲಿ ಮ್ಯೂಸಿಯಂ ಅನ್ನು ಸ್ಥಾಪಿಸಲಾಗುವುದು. ಭಾರತ ಮತ್ತು ಯುಎಇ ನಡುವಿನ ಐತಿಹಾಸಿಕ ಸಂಬಂಧವನ್ನು ಹೆಚ್ಚಿಸಲು ಮತ್ತು ದೇಶದ ನಾಯಕರು ಹಂಚಿಕೊಂಡ ಶಾಂತಿ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಉತ್ತೇಜಿಸಲು ಈ ಮೂಲಕ ಸಾಧ್ಯವಾಗಲಿದೆ ಎಂದು ಭಾವಿಸಲಾಗಿದೆ.

error: Content is protected !! Not allowed copy content from janadhvani.com