ಮಂಗಳೂರು : ದ. ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು, ಕೊಲೆಗಳು ಹಿಂಸಾತ್ಮಕ ಘಟನೆಗಳು ನಿಂತು ಶಾಂತಿ ಸೌಹಾರ್ದತೆ ನೆಲೆಗೊಂಡು ಗತ ವೈಭವವನ್ನು ಮರಳಿ ಪಡೆಯಬೇಕಾದರೆ ಹಿಂದು, ಮುಸ್ಲಿಂ ಕ್ರಿಸ್ತ ಹಾಗೂ ಇತರ ಧರ್ಮಗಳ ನಾಯಕರು ಹಾಗೂ ಜನ ಸಾಮಾನ್ಯರ ಹೃದಯಗಳು ಬೆಸೆದರೆ ಮಾತ್ರ ಸಾಧ್ಯ ಎಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಹೇಳಿದರು.
ಅವರು ಅಡ್ಯಾರ್ ಅಲ್ ಹಸನ್ ಅಕಾಡೆಮಿಯಲ್ಲಿ ನಡೆದ ಎಸ್ ವೈ ಎಸ್ ರಾಜ್ಯ ಸಮಿತಿಯು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಸುವ ಸೌಹಾರ್ದ ಸಂಚಾರದ ಮಂಗಳೂರು ಹಾಗೂ ಪರಂಗಿಪೇಟೆ ಜಂಟಿ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸೌಹಾರ್ದ ಸಂಚಾರ ಮಾನೇಜಿಂಗ್ ಸಮಿತಿಯ ದ. ಕ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಅಧ್ಯಕ್ಷತೆ ವಹಿಸಿದ್ದರು. ಅಲ್ ಹಸನ್ ಅಕಾಡೆಮಿ ಅಡ್ಯಾರ್ ಸಂಸ್ಥೆಯ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಸಿದ್ದೀಕ್ ಮೋಂಟುಗೋಳಿ ಸೌಹಾರ್ದ ಸಂಚಾರ ದ ಮಾಹಿತಿ ನೀಡಿದರು.ಎಸ್ ವೈ ಎಸ್ ರಾಜ್ಯ ಕೋಶಾಧಿಕಾರಿ ಮನ್ಸೂರ್ ಅಲಿ ಕೋಟಗದ್ದೆ, ಎಸ್,ವೈ ಎಸ್ ಜಿಲ್ಲಾ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ, ರಾಜ್ಯ ಕಾರ್ಯದರ್ಶಿ ಹಸೈನಾರ್ ಆನೆಮಹಲ್, ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಗಾಣೆಮಾರ್, ಎಸ್ ವೈ ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಎಸ್ ವೈ ಎಸ್ ದಕ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಇಸ್ ಹಾಕ್ ಝುಹ್ರಿ ಕಾನಕೆರೆ ಮಾತನಾಡಿದರು.
ಅಲ್ ಹಸನ್ ಅಕಾಡೆಮಿಯ ಕೋಶಾಧಿಕಾರಿ
ಹುಸೈನ್ ಹಾಜಿ ಕುವೈಟ್ , ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ಅಧ್ಯಕ್ಷ ವಿ ಎ ಮುಹಮ್ಮದ್ ಸಖಾಫಿ ವಳವೂರು, ಬದ್ರುದ್ದೀನ್ ಅಝ್ಹರಿ ಕೈಕಂಬ, ನಝೀರ್ ಹಾಜಿ ಲುಲು, ಹಸನ್ ಪಾಂಡೇಶ್ವರ, ಬಶೀರ್ ಸಖಾಫಿ ಉಳ್ಳಾಲ, ಹಕೀಮ್ ಪೂಮಣ್ಣು, ಇಬ್ರಾಹಿಂ ಅಹ್ಸನಿ ಮಂಜನಾಡಿ, ಉಸ್ಮಾನ್ ಝುಹ್ರಿ ಕಿನ್ಯ, ಸಿದ್ದೀಕ್ ಸಿಸಿ, ಉಸ್ಮಾನ್ ಫಜೀರು, ಸಹಿತ ಹಲವಾರು ನಾಯಕರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಮಂಗಳೂರು, ಹಾಗೂ ಫರಂಗಿಪೇಟೆ ಕೇಂದ್ರ ಗಳ ಸ್ವಾಗತ ಸಮಿತಿ ರಚಿಸಲಾಯಿತು.
ಜಿಲ್ಲಾ ಕನ್ವೀನರ್ ನವಾಝ್ ಸಖಾಫಿ ಅಡ್ಯಾರ್ ಪದವು ಸ್ವಾಗತಿಸಿದರು. ಜಿಲ್ಲಾ ಕೋಆರ್ಡಿನೇಟರ್ ತೌಸೀಫ್ ಸಅದಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಕೋಆರ್ಡಿನೇಟರ್ ಅಶ್ರಫ್ ಕಿನಾರ ವಂದಿಸಿದರು.