janadhvani

Kannada Online News Paper

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಯಸ್ಸಿ): ಕೇಂದ್ರ ಸಮಿತಿಯ ನವ ಸಾರಥಿಗಳು

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಕೇಂದ್ರ ಸಮಿತಿಯ 30 ನೇ ವಾರ್ಷಿಕ ಮಹಾಸಭೆ ದಿನಾಂಕ 27, ಜೂನ್ 2025 ರಂದು ಡಿಕೆಯಸ್ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್ ಮತ್ತು ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ರವರ ಆಶೀರ್ವಾದ ದೊಂದಿಗೆ ಪ್ರಾರಂಭಗೊಂಡಿತು.

ಡಿಕೆಯಸ್ಸಿ ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ ರವರು ದುಆ ಪ್ರಾರ್ಥನೆಗೈದರು ಹಾಗೂ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ ಉಪಸ್ಥಿತರಿದ್ದರು. ಇಸ್ಮಾಯೀಲ್ ಕಾಟಿಪಳ್ಳ ಖಿರಾಅತ್ ಪಠಿಸಿದರು.ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು ಸಭೆಗೆ ಆಗಮಿಸಿದ ಮತ್ತು ಝೂಂ ಮುಖಾಂತರ ಸಹಕರಿಸಿದ ಸರ್ವ ಸದಸ್ಯರನ್ನು ಅಚ್ಚುಕಟ್ಟಾಗಿ ಸ್ವಾಗತಿಸಿದರು.ಡಿಕೆಯಸ್ಸಿ ಬಹ್ರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಉಸ್ತಾದ್ ಅಬ್ದುಲ್ ಮಜೀದ್ ಸಅದಿ ಸಮಾರಂಭವನ್ನು ಉದ್ಘಾಟಿಸಿದರು.

ಡಿಕೆಯಸ್ಸಿ ವಿಷನ್ 30 ಯ ಬಗ್ಗೆ ಚೆಯರ್ಮ್ಯಾನ್ ಹಾತಿಂ ಕೂಳೂರು ವಿಶದೀಕರಿಸಿದರು. ವಲಯ ಹಾಗೂ ರಾಷ್ಟ್ರೀಯ ಸಮಿತಿಗಳ ಕಾರ್ಯಚಟುವಟಿಕೆ ಗಳನ್ನು ಅಝರ್ ಕೃಷ್ಣಾಪುರ, ಅಬ್ದುಲ್ ಹಮೀದ್ ಕಾಪು, ಅಬ್ದುಲ್ ಅಝೀಝ್ ಕಾಟಿಪಳ್ಳ, ಅಬ್ದುಲ್ ಮಜೀದ್ ಸಅದಿ,ಅಲ್ತಾಫ್ ಬೋಳಾರ್, ಯೂಸುಫ್ ಅಬ್ಬಾಸ್ ಮಂಚಕಲ್,ಅಬ್ದುಲ್ಲ ಉಂಞ ಹಾಗೂ ಹುಸೈನ್ ಹಾಜಿ ಕಿನ್ಯ ವಲಯ/ ರಾಷ್ಟ್ರೀಯ ಸಮಿತಿಗಳ ಪ್ರವರ್ತನೆಗಳ ವರದಿ ತಿಳಿಸಿದರು.

ಪವಿತ್ರ ರಮಳಾನ್ ತಿಂಗಳಲ್ಲಿ ಉತ್ತಮ ಸಾಧನೆಗೈದ ವಲಯ/ ರಾಷ್ಟ್ರೀಯ ಸಮಿತಿಗಳಿಗೆ ಟ್ರೋಫಿ ಗಳನ್ನು ನೀಡಿ ಅಭಿನಂದಿಸ ಲಾಯಿತು.
ಕಾರ್ಯಾಧ್ಯಕ್ಷ ಮುಹಮ್ಮದ್ ಸೀದಿ ಹಾಜಿರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಎರಡು ವರ್ಷಗಳ ಅವಧಿಯಲ್ಲಿ ನಡೆದ ಘಟಕ/ವಲಯ/ ರಾಷ್ಟ್ರೀಯ/ ಜಿಲ್ಲಾ ಮತ್ತು ಮರ್ಕಝ್ ಗಳ ವಿಶೇಷ ಹಾಗೂ ಸಂಪೂರ್ಣ ಬೆಂಬಲ, ಸಹಕಾರ ನಮ್ಮೊಂದಿಗಿದ್ದು ಸಹಕರಿಸಿದ್ದಾರೆ. ಕೃತಜ್ಞತೆಗಳು. ಮುಂದಕ್ಕೆ ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಶೃಧ್ಧೆ ಹಾಗೂ ನಿಷ್ಠಾವಂತ ,ನಿಷ್ಕಳಂಕ ವಾಗಿ ಕಾರ್ಯ ಪ್ರವರ್ತಕರಾದರೆ ಶೈಕ್ಷಣಿಕ ಪ್ರಗತಿಯ ರಂಗ ದಲ್ಲಿ ಹೆಚ್ಚಿನ ಸಾಧನೆ ಮಾಡಬಹುದೆಂದು ನುಡಿದರು.

2025-27 ನೇ ನೂತನ ಸಾರಥಿಗಳನ್ನು ಅಬ್ದುರ್ರಹ್ಮಾನ್ ಮದನಿ ಯವರ ನೇತೃತ್ವದಲ್ಲಿ ಆರಿಸಲಾಯಿತು.
ಅಧ್ಯಕ್ಷರು: ಖುದ್ವತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್
ಕಾರ್ಯಾಧ್ಯಕ್ಷ:ಮುಹಮ್ಮದ್ ಸೀದಿ ಹಾಜಿ ಕುಶಾಲನಗರ
ಪ್ರಧಾನ ಕಾರ್ಯದರ್ಶಿ:ಅಬ್ದುಲ್ ಅಝೀಝ್ ಆತೂರು
ಹಣಕಾಸು ಕಾರ್ಯದರ್ಶಿ:ದಾವೂದ್ ಕಜಮಾರ್
ಉಪಾಧ್ಯಕ್ಷರುಗಳು:
1. ಅಬ್ದುಲ್ ಅಝೀಝ್ ಮೂಳೂರು
2. ಮುಹಮ್ಮದ್ ಇಬ್ರಾಹೀಂ ( ಎಂ.ಇ.) ಮೂಳೂರು
3. ಮೋನಬ್ಬ ಅಬ್ದುರ್ರಹ್ಮಾನ್ ಎರ್ಮಾಳ್
ಕಾರ್ಯದರ್ಶಿಗಳು:
1. ಇಸ್ಮಾಯೀಲ್ ಹೈದ್ರೋಸ್ ಮೂಡಿಗೆರೆ
2. ಇಸ್ಮಾಯೀಲ್ ಪಡ್ಡಂದಡ್ಕ
3. ಮುಹಮ್ಮದ್ ಸಫೀರ್ ಗೂಡಿನಬಳಿ
ಸಂವಹಣಾ ಕಾರ್ಯದರ್ಶಿಗಳು:
1. ಅಬ್ದುಲ್ ಮಜೀದ್ ಕಣ್ಣಂಗಾರ್
2. ಯೂಸುಫ್ ಅರ್ಲಪದವು
ಸಹಾಯಕ ಹಣಕಾಸು ಕಾರ್ಯದರ್ಶಿ:
ಮುಹಮ್ಮದ್ ರೋಯಲ್ ಮುಕ್ವೆ.
ಲೆಕ್ಕ ಪರಿಶೋಧಕ
ಶಾಫಿ ಶುಐಬ್ ಮಂಗಳೂರು
ಸಂಘಟನಾ ಕಾರ್ಯದರ್ಶಿ:
ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ
ಸದಸ್ಯರುಗಳು:
ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ
ಅಬ್ದುಲ್ ಅಝೀಝ್ ಮೂಳೂರು
ಸಫೀರ್ ಗೂಡಿನಬಳಿ
ಅಬ್ದುಲ್ ಮಜೀದ್ ಕಣ್ಣಂಗಾರ್
ಜಮಾಲ್ ಕಣ್ಣಂಗಾರ್
ಅಬ್ದುಲ್ ಅಝೀಝ್ ಬಜ್ಪೆ
ಹಾತಿಂ ಕೂಳೂರು
ಅಬ್ದುಲ್ ಹಮೀದ್ ಉಳ್ಳಾಲ

2026 ನೇ ಸಾಲಿನ ನೂತನ ಕ್ಯಾಲೆಂಡರ್ ರಚಿಸುವ ಬಗ್ಗೆ ಸುಲೈಮಾನ್ ಮಿಲನ್ ಸೂರಿಂಜೆ ಮಾತನಾಡಿದರು.
ಸಭೆಯ ಕೊನೆಯಲ್ಲಿ ನೂತನ ಕಾರ್ಯದರ್ಶಿ ಮುಹಮ್ಮದ್ ಸಫೀರ್ ಗೂಡಿನಬಳಿ ಧನ್ಯವಾದಗೈದು ಕಫ್ಫಾರತುಲ್ ಮಜ್ಲಿಸ್ ಮತ್ತು ಸ್ವಲಾತುನ್ನಬಿ(ಸ) ಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

ವರದಿ: ಇಸ್ಮಾಯೀಲ್ ಕಾಟಿಪಳ್ಳ
ಮೀಡಿಯಾ ವಿಂಗ್