ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಎಸ್‌ವೈಎಸ್ ರಾಜ್ಯ ಸಮಿತಿಯ ವತಿಯಿಂದ ಜುಲೈ 14,15 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸೌಹಾರ್ದ ಸಂಚಾರ ನಡೆಯಲಿದ್ದು, ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಮಂಗಳೂರು ಹಾಗೂ ಪರಂಗಿಪೇಟೆ ಕೇಂದ್ರಗಳ ಜಂಟಿ ಸ್ವಾಗತ ಸಮಿತಿ ರೂಪೀಕರಣ ಸಭೆಯು ಜುಲೈ 6 ಆದಿತ್ಯವಾರದಂದು ಬೆಳಿಗ್ಗೆ 7:00 ಗಂಟೆಗೆ ಅಲ್ ಹಸನ್ ಅಕಾಡಮಿ ಬೀರ್ಪುಗುಡ್ಡೆ ಅಡ್ಯಾರ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಂಗಳೂರು ಝೋನ್ ,ದೇರಳಕಟ್ಟೆ ಝೋನ್,ಉಳ್ಳಾಲ ಝೋನ್ ,ತಲಪಾಡಿ ಝೋನ್ ,ಮಂಜನಾಡಿ ಸರ್ಕಲ್ ಹಾಗೂ ಅಮ್ಮುಂಜೆ ಸರ್ಕಲ್ ವ್ಯಾಪ್ತಿಯ ಎಸ್.ವೈ.ಎಸ್ ,ಕರ್ನಾಟಕ ಮುಸ್ಲಿಂ ಜಮಾಅತ್ ,ಎಸ್ಸೆಸ್ಸೆಫ್ ,ಎಸ್ ಜೆ.ಎಂ ಹಾಗೂ ಎಸ್.ಎಂ.ಎಂ ಸಂಘಟನೆಗಳ ನಾಯಕರೂ ,ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.