‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಎಸ್.ವೈ.ಎಸ್ ರಾಜ್ಯ ಸಮಿತಿಯು ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಸುವ ‘ಸೌಹಾರ್ದ ಸಂಚಾರ’ದ ಬಿ.ಸಿ ರೋಡ್ ಕೇಂದ್ರದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಆಲಡ್ಕ ಪಾಣೆಮಂಗಳೂರು S S ಆಡಿಟೋರಿಯಂ ನಲ್ಲಿ ನಡೆದ ಸಭೆಯಲ್ಲಿ ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯಾ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್ ದ.ಕ ಜಿಲ್ಲಾ ಕೋಶಾಧಿಕಾರಿ ಅಬ್ದುರ್ರಝ್ಝಾಕ್ ಭಾರತ್ ಸ್ವಾಗತಿಸಿದ ಸಭೆಯನ್ನು
ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷರಾದ ಇಬ್ರಾಹಿಂ
ಖಲೀಲ್ ಮಾಲಿಕಿ ಬೋಳಂತೂರು ಉದ್ಘಾಟಿಸಿದರು. ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ವಿಷಯ ಮಂಡಿಸಿ ಮಾತನಾಡಿದರು.
ಈ ಕೆಳಗಿನಂತೆ ಸ್ವಾಗತ ಸಮಿತಿ ರಚಿಸಲಾಯಿತು.
ಸಲಹೆಗಾರರು : ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ,ಹಂಝ ಸಖಾಫಿ ಬಂಟ್ವಾಳ,ಎನ್ ಎಂ ಅಬ್ದುರ್ರರಹ್ಮಾನ್ ಮದನಿ ಜೆಪ್ಪು
ಚಯರ್ಮ್ಯನ್ :ಎಸ್ ಎಂ ಬಶೀರ್ ಹಾಜಿ ಬಿಸಿ ರೋಡ್, ಜನರಲ್ ಕನ್ವೀನರ್ ಅಕ್ಬರ್ ಅಲಿ ಮದನಿ ಆಲಂಪಾಡಿ, ಕೋಶಾಧಿಕಾರಿ ಫೈಝಲ್ ಮುಡಿಪು, ಕೋಆರ್ಡಿನೇಟರ್ ಕರೀಂ ಕದ್ಕಾರ್ ಹಾಗೂ ವೈಸ್ ಚಯರ್ಮ್ಯಾನ್ , ಕನ್ವೀನರ್ ಗಳನ್ನು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಎಸ್.ವೈ.ಎಸ್ ವೆಸ್ಟ್ ಜಿಲ್ಲಾ ಅಧ್ಯಕ್ಷರಾದ ಮೆಹಬೂಬ್ ಸಖಾಫಿ ಕಿನ್ಯಾ ಹಾಗೂ
ಎಸ್.ವೈ.ಎಸ್ ವೆಸ್ಟ್ ಜಿಲ್ಲಾ ಕೋಡಿನೇಟರ್ ತೌಸೀಫ್ ಸಅದಿ ಹರೇಕಳ ಶುಭ ಹಾರೈಸಿ ಮಾತನಾಡಿದರು.
ವೆಸ್ಟ್ ಜಿಲ್ಲಾ ನಾಯಕರಾದ ಮಹ್ಮೂದ್ ಸಅದಿ ಕುಕ್ಕಾಜೆ,ಉಮರ್ ಮದನಿ ಪರಪ್ಪು,
ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ಝೋನ್ ನಾಯಕರದ ಇಸ್ಮಾಯಿಲ್ ನಾವುರ, ಬಶೀರ್ ಹಾಜಿ ಬಿ.ಸಿ ರೋಡ್ ಉಪಸ್ಥಿತರಿದ್ದರು.
ಕೊನೆಯಲ್ಲಿ ಅಕ್ಬರಲಿ ಮದನಿ ಧನ್ಯವಾದ ಹೇಳಿದರು.