‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಎಸ್.ವೈ.ಎಸ್ ರಾಜ್ಯ ಸಮಿತಿಯು ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಸುವ ‘ಸೌಹಾರ್ದ ಸಂಚಾರ’ದ ಕಲ್ಲಡ್ಕ ಕೇಂದ್ರದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ದಾರುಲ್ ಅಶ್ಅರಿಯ್ಯಾ ಸುರಿಬೈಲಿನಲ್ಲಿ ನಡೆದ ಸಭೆಯಲ್ಲಿ
ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯಾ ಅಧ್ಯಕ್ಷತೆ ವಹಿಸಿದ್ದರು. ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ವಿಷಯ ಮಂಡಿಸಿ ಮಾತನಾಡಿದರು.
ಈ ಕೆಳಗಿನಂತೆ ಸ್ವಾಗತ ಸಮಿತಿ ರಚಿಸಲಾಯಿತು.
ಸಲಹೆಗಾರರು : ಶಿಹಾಬುದ್ದೀನ್ ತಂಙಳ್ ಮದಕ,
ಚಯರ್ಮ್ಯನ್ :ಝಕರಿಯ್ಯಾ ನಾರ್ಶ, ಜನರಲ್ ಕನ್ವೀನರ್ ಅಸ್ಲಂ ಹಾಜಿ ಸಂಪಿಲ, ಕೋಶಾಧಿಕಾರಿ ದಾವೂದ್ ಕಲ್ಲಡ್ಕ, ಕೋಆರ್ಡಿನೇಟರ್ ಕರೀಂ ಕದ್ಕಾರ್ ಹಾಗೂ ಇತರ ವೈಸ್ ಚಯರ್ಮ್ಯಾನ್ , ಕನ್ವೀನರ್ ಗಳನ್ನು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್, ಕಾರ್ಯದರ್ಶಿ ನವಾಝ್ ಸಖಾಫಿ ಅಡ್ಯಾರ್, ರಾಜ್ಯ ನಾಯಕರಾದ ಮುಸ್ತಫ ಕೋಡಪದವು,ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ, ಕೆ.ಸಿ.ಎಫ್ ನಾಯಕರಾದ ಹಂಝ ಮೈಂದಾಲ, ಎಸ್.ವೈ.ಎಸ್ ಜಿಲ್ಲಾ ನಾಯಕರಾದ ಮಹ್ಮೂದ್ ಸಅದಿ ಕುಕ್ಕಾಜೆ, ರಶೀದ್ ಹಾಜಿ ವಗ್ಗ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಮುತ್ತಲಿಬ್ ಹಾಜಿ ನಾರ್ಶ ಮೊದಲಾದವರು ಉಪಸ್ಥಿತರಿದ್ದರು.
ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಖಲೀಲ್ ಮಾಲಿಕಿ ಬೋಳಂತೂರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.