ರಿಯಾದ್: ವಿಮಾನ ಯಾತ್ರಾ ವೇಳೆ ಕಾರ್ಡ್ ಬೋರ್ಡ್ ಪೆಟ್ಟಿಗೆಯಲ್ಲಿ ಲಗೇಜ್ ಸಾಗಿಸಲು ಪ್ರಯಾಣಿಕರನ್ನು ಅನುಮತಿಸಲಾಗುವುದಿಲ್ಲ ಎನ್ನುವ ಪ್ರಚಾರವು ಕಪೋಲಕಲ್ಪಿತವಾಗಿದೆ. ಸೌದಿ ಏರ್ಪೋರ್ಟ್ ಅಥಾರಿಟಿಯ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿರುವ ಸುದ್ದಿಯ ಸಂಬಂಧಿಸಿದಂತೆ ಈ ವಿವರಣೆ ನೀಡಲಾಗಿದೆ.
ಸೌದಿ ಏರ್ಪೋರ್ಟ್ ಅಥಾರಿಟಿ ಮತ್ತು ಗಲ್ಫ್ ಏರ್ ಹೆಸರಿನಲ್ಲಿ,ರಟ್ಟಿನ ಪೆಟ್ಟಿಗೆಗಳಲ್ಲಿ ಸಾಮಾನು ಸರಂಜಾಮುಗಳನ್ನು ಸಾಗಿಸಲು ಅನುಮತಿಸುವುದಿಲ್ಲ ಎಂದು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಪಡಿಸಲಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಕನ್ವೇಯರ್ ಬೆಲ್ಟ್ ಗಳಿಗೆ ತಟಸ್ಥ ವಾಗದ ರೀತಿಯಲ್ಲಿ ಸಮತಟ್ಟಾದ ಮೇಲ್ಮೈ ಹೊಂದಿರುವ ಎಲ್ಲಾ ರೀತಿಯ ಪೆಟ್ಟಿಗೆಗಳನ್ನೂ ಪ್ರಯಾಣಿಕರು ಬಳಸಲು ಅನುಮತಿಸಲಾಗಿದೆ. ಅತಿ-ಗಾತ್ರದ ಪೆಟ್ಟಿಗೆ ಮತ್ತು ಹಗ್ಗಗಳಿಂದ ಕಟ್ಟಲಾದ ಲಗೇಜ್ಗಳನ್ನು ಈ ಹಿಂದೆಯೇ ನಿಷೇಧಿಸಲಾಗಿತ್ತು.ಕಟ್ಟಲು ಉಪಯೋಗಿಸಿದ ಹಗ್ಗವು ಕನ್ವೇಯರ್ ಬೆಲ್ಟ್ ಗಳಲ್ಲಿ ಸಿಲುಕಿ ಮುರಿದುಬಿಟ್ಟ ಕಾರಣ ನಿಷೇಧವನ್ನು ಹೇರಲಾಗಿತ್ತು.
ಸಾರ್ವಜನಿಕ ಹಿತಾಸಕ್ತಿಯನ್ನು ಮಾನಿಸಿ ಲಗೇಜ್ ಸಂಬಂಧಿಸಿದಂತೆ ಈಗಾಗಲೇ ವೆಬ್ ಸೈಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಹಿತಿಯನ್ನು ಪ್ರಕಟಿಸಲಾಗಿದೆ ಎಂದು ಸೌದಿ ಏರ್ಲೈನ್ಸ್ ತಿಳಿಸಿದೆ. ಹೊಸ ಮಾರ್ಗಸೂಚಿಗಳನ್ನು ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರೋಲಿ ಬ್ಯಾಗ್ ಮತ್ತು ಪ್ಲಾಸ್ಟಿಕ್ ಲಗೇಜ್ ಬ್ಯಾಗ್ ಮಾರಾಟಗಾರರು ಅತ್ಯಂತ ವ್ಯವಸ್ಥಿತವಾಗಿ ಇಂತಹ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಅನುಮಾನಿಸಲಾಗಿದೆ.