ರಿಯಾದ್: ದೇಶದಲ್ಲಿ ಕಾನೂನುಬಾಹಿರವಾಗಿ ವಿದೇಶಿಗಳು ನಡೆಸುತ್ತಿರುವ ಬೆನಾಮಿ ಉದ್ಯಮಗಳನ್ನು ಮುಚ್ಚುವ ಬದಲು ಅಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸೌದಿ ಅರೇಬಿಯಾ ಪ್ರಯತ್ನಿಸುತ್ತಿದೆ. ಸ್ಥಳೀಯ ಆರ್ಥಿಕತೆಗೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯನ್ನು ಮನಗಂಡು ಉದ್ಯಮಗಳನ್ನು ಮುಂದುವರಿಸಲು ಉದ್ದೇಶಿಸಲಾಗಿದೆ.
ಸಣ್ಣ ಮತ್ತು ಮಧ್ಯಮ ಸ್ಥಾಪನೆಯ ಪ್ರಾಧಿಕಾರ(ಮುನ್ಶಆತ್)ದ ಪ್ರಕಾರ, ವ್ಯವಸ್ಥಿತವಾಗಿ ಚಾಲನೆಯಲ್ಲಿರುವ ಬೆನಾಮಿ ಉದ್ಯಮಗಳನ್ನು ಮುಚ್ಚುವುದು ಪ್ರಯೋಜನಕಾರಿಯಲ್ಲ, ಮುಚ್ಚುವ ಮೂಲಕ ಸ್ಥಳೀಯ ಜನರ ಉದ್ಯೋಗಗಳು ಮತ್ತು ಮಾರಾಟದಲ್ಲಿ ನಷ್ಟ ಉಂಟಾಗಲಿದೆ. ಇದಲ್ಲದೆ, ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಸ್ಥಳೀಯ ಆರ್ಥಿಕತೆಯು ವ್ಯರ್ಥವಾಗುತ್ತದೆ ಎಂದು ಮುನ್ಶಆತ್ತ್ ವ್ಯಕ್ತಪಡಿಸಿದೆ. ದೇಶದ ಬೆನಾಮಿ ಉದ್ಯಮಗಳಿಗೆ 30 ಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾವಿವೆ. ಅಂತಹ ಸಂಸ್ಥೆಗಳನ್ನು ಮುಚ್ಚುವುದು ರಾಷ್ಟ್ರೀಯ ಆರ್ಥಿಕತೆಗೆ ಪೆಟ್ಟಾಗಲಿದೆ. ಆದ್ದರಿಂದ ಬೆನಾಮಿ ಉದ್ಯಮಗಳನ್ನು ಕಾನೂನುಬದ್ಧವಾಗಿರಲು ಕಾನೂನು ತಿದ್ದುಪಡಿಯ ಅಗತ್ಯವಿದೆ ಎಂದು ಮುನ್ಶಆತ್ ವ್ಯಕ್ತಪಡಿಸಿದೆ.
ಸೌದಿ ಯಲ್ಲಿ, 12 ಸಣ್ಣ ಪ್ರಮಾಣದ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಲ್ಲಿ ಮುಂದಿನ ವರ್ಷ ಜನವರಿವೇಳೆಗೆ ಸಂಪೂರ್ಣ ದೇಶೀಕರಣಗೊಳ್ಳಲಿದೆ. ಹೆಚ್ಚಿನ ಪ್ರದೇಶಗಳ ಬೆನಾಮಿ ಉದ್ಯಮಿಗಳನ್ನು ತೊಡೆದುಹಾಕಲು ಮತ್ತು ಸ್ಥಳೀಯ ಜನರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ದೇಶೀಕರಣಗೊಳಿಸಲಾಗುತ್ತದೆ. ಆದರೆ ದೇಶೀಕರಣ ಏರ್ಪಡಿಸಲಾದ ವಲಯದಲ್ಲಿ ಎದುರಾದ ಹಲವು ತೊಡಕುಗಳ ಹಿನ್ನೆಲೆಯಲ್ಲಿ ಹೊಸ ತಂತ್ರಗಳ ಆಲೋಚನೆ ನಡೆಯುತ್ತಿದೆ ಎನ್ನಲಾಗಿದೆ.