janadhvani

Kannada Online News Paper

ಒಟ್ಟಾಗಿ ನಿಂತು ಸೌಹಾರ್ದ ಭಾರತ ಕಟ್ಟೋಣ- ಹಿರಿ ಶಾಂತವೀರ ಸ್ವಾಮಿಜಿ

ಎಸ್ಸೆಸ್ಸೆಫ್ ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಹಮ್ಮಿಕೊಂಡ ಸೌಹಾರ್ದ ನಡಿಗೆ ಹೂವಿನ ಹಡಗಲಿ ಪಟ್ಟಣಕ್ಕೆ ತಲುಪಿದಾಗ ಕಾರ್ಯಕ್ರಮ ಉದ್ಘಾಟಿಸುತ್ತಾ ಶ್ರೀಗಳು ಮಾತನಾಡಿದರು.

ಹೊಸಪೇಟೆ: ಧರ್ಮಗಳು ಪ್ರೀತಿಯನ್ನು ಬೋಧಿಸಿದೆ‌. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ಬಿಕ್ಕಟ್ಟು ಸೃಷ್ಟಿಸಲು ಯತ್ನಿಸುತ್ತಿದ್ದಾನೆ. ಅಂತಹವರನ್ನು ದೂರ ಸರಿಸಿ ನಾವೆಲ್ಲ ಒಟ್ಟಾಗಿ ನಿಂತು ಸೌಹಾರ್ದ ಭಾರತ ಕಟ್ಟೋಣ ಎಂದು ಶ್ರೀ ಹಿರಿ ಶಾಂತವೀರ ಸ್ವಾಮಿಜಿ ಗವಿಮಠ ಹೂವಿನ ಹಡಗಲಿ ಇವರು ಹೇಳಿದರು.

ಎಸ್ಸೆಸ್ಸೆಫ್ ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಹಮ್ಮಿಕೊಂಡ ಸೌಹಾರ್ದ ನಡಿಗೆ ಹೂವಿನ ಹಡಗಲಿ ಪಟ್ಟಣಕ್ಕೆ ತಲುಪಿದಾಗ ಕಾರ್ಯಕ್ರಮ ಉದ್ಘಾಟಿಸುತ್ತಾ ಶ್ರೀಗಳು ಮಾತನಾಡಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮಾತನಾಡಿ ನಮಗೆ ಧರ್ಮಗಳು ಬೇಕು ಧರ್ಮಾಂಧತೆ ಬೇಡ. ಅದಕ್ಕಾಗಿ ನಾಡಿನ ಪ್ರಮುಖ ಸ್ವಾಮೀಜಿಗಳು, ಕ್ರೈಸ್ತ ಫಾದರ್‌ಗಳು ಹಾಗೂ ಮುಸ್ಲಿಂ ಧರ್ಮ ಗುರುಗಳು ಕೈಕೈ ಹಿಡಿದು ರಾಜ್ಯದ ಇಪ್ಪತ್ತು ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಲ್ಲನಕೆರೆ ಮಠ ಪೀಠಾಧಿಪತಿ ಚೆನ್ನಬಸವ ಸ್ವಾಮಿಗಳು, ನಾಗತಿಬಸಾಪುರ ಗಿರಿರಾಜ ಹಾಲಸ್ವಾಮಿ, ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ಡಾ. ರಾಕೇಶಯ್ಯ, ಕಾರ್ಮೇಲ್ ಚರ್ಚ್ ಫಾ. ಡೆಂಜಲ್ ವೇಗಸ್,ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಾರದ ಗೌಸ್ ಮೊಹಿದ್ದೀನ್, ಕೋಡಿಹಳ್ಳಿ ಮುದುಕಪ್ಪ, ಬಿಚ್ಚುಗತ್ತಿ ಖಾಜಾ, ಹಿರಿಯ ಪತ್ರಕರ್ತ ಅಯ್ಯನಗೌಡ್ರು ಹಾಗೂ ದಲಿತ ಸಂಘಟನೆ, ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.