janadhvani

Kannada Online News Paper

ರಕ್ತಧಾನ ಶಿಬಿರಗಳು ಕಾಲದ ಅವಶ್ಯಕತೆ- ಜಿ ಏ ಬಾವಾ ನಿವೃತ್ತ ಡಿಸಿಪಿ

ಬೆಂಗಳೂರು: ರಕ್ತ ನೀಡುವ ವ್ಯಕ್ತಿ ಯಾವತ್ತೂ ಆರೋಗ್ಯವಂತರಾಗಿರುತ್ತಾರೆ. ಒಬ್ಬ ರಕ್ತ ನೀಡುವ ಮೂಲಕ ಅವನ ಆರೋಗ್ಯಕ್ಕೂ ಅನುಕೂಲ ಹಾಗೂ ಇನ್ನೊಂದು ಜೀವ ಉಳಿಸಿದ ಪುಣ್ಯವೂ ಲಭಿಸುತ್ತದೆ. ಇದರ ಮಹತ್ವ ಅರಿತು ಯುವ ಸಮೂಹ ಮುಂದೆಬರಬೇಕೆಂದು ನಿವೃತ್ತ ಡಿಸಿಪಿ, ಡ್ರಗ್ಸ್ ಮುಕ್ತ ಕರ್ನಾಟಕ ಆಂದೋಲನ ಸಾರಥಿ ಜಿ ಏ ಬಾವಾ ಹೇಳಿದರು.

ಅವರು ಬೆಂಗಳೂರಿನಲ್ಲಿ ಐಟಿಐ ಹಳೆವಿದ್ಯಾರ್ಥಿ HHS & HMS ನಡೆಸಿದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಯುವ ಸಮುದಾಯ ಇಂದು ಉತ್ತಮ ಸೇವೆ ನೀಡಿ ಮಾದರಿಯಾಗುತ್ತಿದ್ದಾರೆ.
ಕೆಲವೊಂದು ಡ್ರಗ್ಸ್ ಎಂಬ ಮಹಾಮಾರಿಗೆ ಯುವಕರು ಬಲಿಯಾಗಿದ್ದು ಖೇದಕರ.
ಯುವಕರು ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಿ ಮಾನವೀಯ ಸೇವೆಗೆ ಮುಂದಾಗಬೇಕು.
ದಾರಿ ತಪ್ಪುತ್ತಿರುವ ಯುವಕರನ್ನು ಸರಿ ದಾರಿಗೆ ತರುವ ಪ್ರಯತ್ನಕ್ಕೆ ಕೈ ಹಾಕಬೇಕಿದೆ.
ಇಂತಹಾ ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯಬೇಕೆಂದು ಅವರು ತಿಳಿಸಿದರು.