ಮಂಗಳೂರು. ಇಂದು ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಮಾದಕತೆಗೆ ಬಲಿಯಾಗುತ್ತಿರುವ ಸುದ್ದಿ ನಿರಂತರವಾಗಿ ಕೇಳಿ ಬರುತ್ತಿದೆ.
ಈ ನಿಟ್ಟಿನಲ್ಲಿ ನಾವು ಅಲ್ ಸಲಾಮ ಸಂಸ್ಥೆಯನ್ನು ಕಟ್ಟಿ ಮಕ್ಕಳಿಗೂ ಮತ್ತು ಪೋಷಕರಿಗೂ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸಲಿದ್ದೇವೆ ಎಂದು ಅಲ್ ಸಲಾಮ ಸಂಸ್ಥೆಯ ಪ್ರಮುಖರಾದ ವೈಟ್ ಸ್ಟೋನ್ ಶರೀಫ್ ಹಾಜಿ ಹೇಳಿದ್ದಾರೆ.
ಇಂದು ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಇಂದಿನ ಮಕ್ಕಳಿಗೆ ಕೌನ್ಸಿಲಿಂಗ್ ತುಂಬಾ ಪ್ರಧಾನವಾಗಿರುತ್ತದೆ.
ಈ ನಿಟ್ಟಿನಲ್ಲಿ ಅಲ್ ಸಲಾಮ ವಿವಿದ ತರಬೇತಿಯನ್ನು ನೀಡುವುದರ ಮೂಲಕ ಹಲವಾರು ಯೋಜನೆಗಳೊಂದಿಗೆ ಮುನ್ನಡೆಯಲಿದೆ.
ಇಲ್ಲಿ ಮಾದಕತೆ ಮುಕ್ತ ಸಮಾಜಕ್ಕೆ ಮಕ್ಕಳ ಪೋಷಕರು ಹೆಚ್ಚು ಕಾಲಜಿ ವಹಿಸಬೇಕು.
ಹೆತ್ತವರ ಜವಾಬ್ದಾರಿ ಪ್ರಮುಖವಾಗಿರುತ್ತದೆ.
ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯೂ ಯೋಜನೆಗಳನ್ನು ರೂಪುಹಾಕಿ ಮುನ್ನಡೆಯಲಿದೆಯೆಂದು ಅವರು ತಿಳಿಸಿದ್ದಾರೆ.
ಶೈಖ್ ಮುಹಮ್ಮದ್ ಇರ್ಫಾನಿ, ಇಕ್ಬಾಲ್ ಬಾಳಿಲ, ಜಲೀಲ್ ಸುರತ್ಕಲ್, ಇಮ್ತಿಯಾಝ್ ಇಡ್ಯಾ, ಇಬ್ರಾಹಿಂ ಕೋನಾಜೆ, ಮಿಖ್ದಾದ್ ಸಜಿಪ, ನಾಸಿರ್ ಪೆರ್ಲಂಪಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.