ಲಖನೌ: ತಾಜ್‌ಮಹಲ್ ಶಿವನ ದೇವಾಲಯ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಗೆ ಅಜಂ ಖಾನ್ ಈ ರೀತಿ ಚುಚ್ಚು ಮಾತಿನ ಪ್ರತಿಕ್ರಿಯೆ ನೀಡಿರುವ ವಿಡಿಯೊ ಈಗ ವೈರಲ್ ಆಗಿದೆ.
‘ತಾಜ್‌ಮಹಲ್ ಮೂಲದಲ್ಲಿ ಶಿವನ ದೇವಾಲಯ. ಈ ಐತಿಹಾಸಿಕ ಕಟ್ಟಡವನ್ನು ಧ್ವಂಸಗೊಳಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವ ವಹಿಸಿಕೊಂಡರೆ ನಾನೂ ಕೈಜೋಡಿಸುತ್ತೇನೆ’ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್ ಹೇಳಿದ್ದಾರೆ.
‘ತಾಜ್‌ಮಹಲ್ ಶಿವನ ದೇವಾಲಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು, ಅದನ್ನು ಧ್ವಂಸಗೊಳಿಸಲು ನಾನು ಬೆಂಬಲ ನೀಡುತ್ತೇನೆ. ತಾಜ್‌ಮಹಲ್ ಕೆಡುವುವಲ್ಲಿ ಮೊದಲ ಹೊಡೆತ ಯೋಗಿ ಆದಿತ್ಯನಾಥ್ ಅವರದಾದರೆ, ಎರಡನೇ ಏಟು ನನ್ನದಾಗಿರುತ್ತದೆ. ಈ ಕಾರ್ಯಕ್ಕೆ ಹೆಗಲು ಕೊಡುವ ಸಂಬಂಧ ನಾನೂ ಬಿಜೆಪಿ ಸೇರುತ್ತೇನೆ. ಜೊತೆಗೆ 20 ಸಾವಿರಕ್ಕೂ ಅಧಿಕ ಜನರನ್ನು ಕರೆದುಕೊಂಡು ಬರುತ್ತೇನೆ’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
‘ತಾಜ್ ಮಹಲ್ ಗುಲಾಮಗಿರಿಯ ದ್ಯೋತಕವೂ ಆಗಿದೆ’ ಎಂದು ಹೇಳುವ ಮೂಲಕ ಅಜಂ ಖಾನ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಿವಿದಿದ್ದಾರೆ.
ಇನ್ನಷ್ಟು ಸುದ್ದಿಗಳು
ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಪ್ರಮಾಣ ವಚನ ಸ್ವೀಕಾರ
ಭಾರತೀಯ ಮಣ್ಣಲ್ಲಿ ಹಳ್ಳಿ ನಿರ್ಮಿಸಿದ ಚೀನಾ- ಪ್ರಧಾನಿ ಮೌನವೇಕೆ?
ಟ್ರಂಪ್ ವಿದಾಯ ಭಾಷಣ- ಹೊಸ ಸರ್ಕಾರಕ್ಕೆ ಶುಭ ಹಾರೈಕೆ
ಗೋರಕ್ಷಕರ ಮೇಲಿನ ಎಲ್ಲಾ ಪ್ರಕರಣಗಳು ವಾಪಸ್- ಪಶು ಸಂಗೋಪನೆ ಸಚಿವ
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸುರತ್ಕಲ್: ಸೋಶಿಯಲ್ ಮೀಡಿಯಾ ಮೂಲಕ ಹನಿಟ್ರ್ಯಾಪ್- ನಾಲ್ವರ ಬಂಧನ