ಡ್ರಗ್ಸ್ ಮುಕ್ತ ಕರ್ನಾಟಕ ಆಂದೋಲನ ಭಾಗವಾಗಿ ಆಯೋಜಿಸಲಾಗುವ ಕಾರ್ಯ ಯೋಜನೆಗಳ ಬಗ್ಗೆ ಯುವ ಉದ್ಯಮಿ mash al ಸಂಸ್ಥೆಯ ಸ್ಥಾಪಕ ಮುಹಮ್ಮದ್ ಹನೀಫ್ ರವರನ್ನು ಇಕ್ಬಾಲ್ ಭೇಟಿಯಾಗಿ ಮಾಹಿತಿಯನ್ನು ನೀಡಿದರು.
ಇಂದು ವಿದ್ಯಾರ್ಥಿಗಳೇ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಸಮಾಜದ ದೊಡ್ಡ ದುರಂತವಾಗಿದೆ.
ಈ ಬಗ್ಗೆ ಮಕ್ಕಳಿಗಿಂತ ಹೆಚ್ಚು ಪೋಷಕರೇ ಮುಂಜಾಗ್ರತೆ ವಹಿಸಿದರೆ ಮಾತ್ರ ಈ ಅನಾಹುತಗಳಿಂದ ತಪ್ಪಿಸಬಹುದು.
ಈ ನಿಟ್ಟಿನಲ್ಲಿ ಕುಟುಂಬ ಸಮ್ಮಿಲನ ಮೊಹಲ್ಲಾ ಜಾಗೃತಿ ಸಭೆ ಹಾಗೂ ಬಲಿಯಾದ ಮಕ್ಕಳಿಗೆ ಕೌಂಸ್ಲಿಂಗ್ ನಡೆಸುವ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು.
ಸಮಾಜದ ಬಗ್ಗೆ ಹೆಚ್ಚು ಕಾಳಜಿ ಇರುವ ಮಶ್ ಅಲ್ ಸಂಸ್ಥೆಯೂ ಕೈ ಜೋಡಿಸುವ ಬಗ್ಗೆ ಮುಹಮ್ಮದ್ ಹನೀಫ್ ತಿಳಿಸಿದರು.
ಈ ಸಂದರ್ಭದಲ್ಲಿ ತಲ್ಲಾತ್ ಸಜಿಪ, ಮುಹಮ್ಮದ್ ಹನೀಫ್ ವಳಚ್ಚಿಲ್, ಮಿಖ್ ದಾದ್ ಮೊದಲಾದವರು ಉಪಸ್ಥಿತರಿದ್ದರು.