ಮಂಗಳೂರು: ದೂದ್ ನಾನಾ ಮುಹಿಬ್ಬ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕಾರ್ಪಣೆಗೊಳ್ಳಲಿರುವ ಎರಡು ಆಂಬುಲೆನ್ಸ್ ಇಂದು ಮೂಡಬಿದ್ರೆ ಶೋರೂಮಿನಿಂದ ಬಿಡುಗಡೆಗೊಳಿಸಲಾಯಿತು.
ಸೆಯ್ಯದ್ ಜಲಾಲ್ ತಂಙಳ್ ನೇತೃತ್ವದಲ್ಲಿ ಇಂದು ಎರಡು ಆಂಬುಲೆನ್ಸ್ ಹೊರತರಲಾಯಿತು.
ಈ ಸಂದರ್ಭದಲ್ಲಿ ಕುಕ್ಕಿಲ ದಾರಿಮಿ, ಶರೀಫ್ ದಾರಿಮಿ ಸೇರಿದಂತೆ ಹಲವು ಮುಖಂಡರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಯೋಜನೆಯ ಪ್ರಮುಖ ರೂವಾರಿ ಝೈನುಲ್ ಆಬಿದ್ ಲಕ್ಷ್ಮೀಶ್ವರ ಅತಿಥಿಗಳನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಝೖನುಲ್ ಆಬಿದ್ ಆಂಬುಲೆನ್ಸ್ ಲೋಕಾರ್ಪಣೆ ಜೂನ್ 2ರಂದು ಲಕ್ಷೀಶ್ವರದಲ್ಲಿ ನಡೆಯಲಿದೆ ಎಂದು ತಿಳಿಸಿದರು.