ಬೆಳ್ತಂಗಡಿ: ಜೂನ್ 15 SჄS ಬೆಳ್ತಂಗಡಿ ಝೋನ್ ಸಮಿತಿಯಿಂದ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಇಂದು ಸಂಜೆ 6 ಗಂಟೆಗೆ ಸರಿಯಾಗಿ FM ಗಾರ್ಡನ್ ಗುರುವಾಯನಕೆರೆಯಲ್ಲಿ ನಡೆಯಲಿದೆ.
SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಬಹು ಅಬ್ದುರ್ರಹ್ಮಾನ್ ಸಖಾಫಿ ಆಲಂದಿಲ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದತ್ ಬಾ ಅಲವಿ ತಂಞಳ್ ಉಲ್ತೂರು ಉದ್ಘಾಟಿಸುವರು.
ಆಧ್ಯಾತ್ಮಿಕ ನೇತ್ರತ್ವ ಹಾಗೂ ದುಆ ಮಜ್ಲಿಸ್ ಬಹು ಅಸ್ಸಯ್ಯಿದ್ ಜಲಾಲುದ್ದೀನ್ ತಂಞಳ್ ಅಲ್ ಹಾದಿ ಮಲ್‌ಜಹ್ ನೇತೃತ್ವ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಬಹು ತ್ವಾಹಿರ್ ಸಖಾಫಿ ಉಸ್ತಾದ್ ಮಂಜೇರೀ ಕೇರಳ ಇವರು “ಸ್ಮಾರ್ಟ್ ಲೀಡರ್ಸ್” ಎಂಬ ವಿಷಯದಲ್ಲಿ ತರಗತಿ ಮಂಡಿಸಲಿದ್ದಾರೆ.
ಸಂಘಟನೆಯ ಜವಾಬ್ದಾರಿ ಎಂಬ ವಿಷಯದಲ್ಲಿ
SჄS ಈಸ್ಟ್ ಜಿಲ್ಲಾ ಅಧ್ಯಕ್ಷರು ಬಹು ಅಶ್ರಫ್ ಸಖಾಫಿ ಮಾಡಾವು ವಿವರಿಸಿ ಕೊಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯುನಿಟ್ ,ಸರ್ಕಲ್ ಪದಾಧಿಕಾರಿಗಳು ಹಾಗೂ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರೂ ಸರಿ ಸುಮಾರು 300 ಕ್ಕೂ ಅಧಿಕ ನಾಯಕರು ಭಾಗವಹಿಸಲಿದ್ದಾರೆ.
ಎಂದು SჄS ಬೆಳ್ತಂಗಡಿ ಝೋನ್ ಪ್ರದಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.