janadhvani

Kannada Online News Paper

ಹಾಯಿಲ್: ಕೆಸಿಎಫ್ ಕಾರ್ಯಕರ್ತ ಅಬ್ದುಲ್ ಕರೀಂ ಹರೇಕಳ ನಿಧನ- ಸಂಘಟನಾ ಕಾರ್ಯಕರ್ತರ ನೇತೃತ್ವದಲ್ಲಿ ದಫನ

ಮೃತರು ಹಾಯಿಲ್ KCF ನ ಸ್ಥಾಪಕ ಸದಸ್ಯರಾಗಿದ್ದು ಹಲವಾರು ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ

ಸೌದಿ ಅರೇಬಿಯಾದ ಹಾಯಿಲ್ ನಲ್ಲಿ KCF ಹಾಯಿಲ್ ಸೆಕ್ಟರ್ ಕೋಶಾಧಿಕಾರಿಯಾಗಿದ್ದ ಅಬ್ದುಲ್ ಕರೀಂ ಹರೇಕಳ ಅವರು ಅಲ್ಪ ಕಾಲದ ರೋಗದಿಂದ ಹಾಯಿಲ್ ನ ಕಿಂಗ್ ಖಾಲಿದ್ ಆಸ್ಪತ್ರೆಯಲ್ಲಿ ಜೂ.2 ರಂದು ನಿಧನರಾಗಿದ್ದರು.

ಅವರು ಕಳೆದ 25 ವರ್ಷಗಳಿಂದ ಹಾಯಿಲ್ ಸಲಾಮತ್ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು.
ಮೃತರು ಹಾಯಿಲ್ KCF ನ ಸ್ಥಾಪಕ ಸದಸ್ಯರಾಗಿದ್ದು ಹಲವಾರು ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ICF ಸೇರಿದಂತೆ ಹಲವಾರು ಧಾರ್ಮಿಕ ಸಂಸ್ಥೆಗಳ ಸಹಾಯಿಯಾಗಿದ್ದರು.

KCF ಮತ್ತು ICF ಸಾಂತ್ವನ ತಂಡವು ಮೃತರ ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು 24 ಗಂಟೆಯೊಳಗಡೆ ಸರಿಪಡಿಸಿ 03-06-2025 ರಂದು ಸಂಜೆ ಅಸರ್ ನಮಾಜ್ ನಂತರ ಹಾಯಿಲ್ ಸದ್ ಯಾನ್ ಮಸ್ಜಿದ್ ಇಬ್ನು ಲೈಲ್ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು. ಹಾಯಿಲ್ KCF ಮತ್ತು ICF ಕಾರ್ಯಕರ್ತರು , ಸಲಾಮತ್ ಆಸ್ಪತ್ರೆ ಸಹೋದ್ಯೋಗಿಗಳು , ಮಂಗಳೂರು ಮತ್ತು ಕೇರಳ ಅನಿವಾಸಿ ಸಹೋದರರು ದಫನ ಕಾರ್ಯದಲ್ಲಿ ಪಾಲ್ಗೊಂಡರು.