janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ದ‌.ಕ ಜಿಲ್ಲಾ ವೆಸ್ಟ್- ನೂತನ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು:ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾ ವೆಸ್ಟ್ ಸಮಿತಿಯ 2023-25 ಸಾಲಿನ ದ್ವೈವಾರ್ಷಿಕ ಮಹಾಸಭೆಯು ಮಂಜನಾಡಿ ಅಲ್ ಮದೀನಃ ಮಲಾಝ್ ಆಡಿಟೋರಿಯಂನಲ್ಲಿ ಜಿಲ್ಲಾಧ್ಯಕ್ಷ ಅಲೀ ಕುಂಞಿ ಹಾಜಿ ಪಾರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಇಬ್ರಾಹಿಂ ಮದನಿಯವರು ಸಭೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಸಮಿತಿ ಪುನರ್ರಚನೆಗೆ ರಾಜ್ಯ ಸಮಿತಿ ರಿಟೇನಿಂಗ್ ಆಫೀಸರಾಗಿ ಆಗಮಿಸಿದ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿಯವರು ನಾಯಕತ್ವ ನೀಡಿದರು. ರಾಜ್ಯ,ಜಿಲ್ಲಾ ನಾಯಕರು ಹಾಗೂ ಝೋನ್ ಕೌನ್ಸಿಲ್ ಗಳು ಭಾಗವಹಿಸಿದ ಪ್ರಸ್ತುತ ಕಾರ್ಯಕ್ರಮದಲ್ಲಿ 2025-27 ನೇ ಸಾಲಿನ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.

ವೆಸ್ಟ್ ಜಿಲ್ಲಾಧ್ಯಕ್ಷರಾಗಿ ಹನೀಫ್ ಹಾಜಿ ಬಜ್ಪೆ ,ಪ್ರಧಾನ ಕಾರ್ಯದರ್ಶಿಯಾಗಿ ಖತರ್ ರಹೀಮ್ ಸಅದಿ ಪುನರಾಯ್ಕೆ, ಕೋಶಾಧಿಕಾರಿಯಾಗಿ ಬಶೀರ್ ಹಾಜಿ ಕುಂಬ್ರ ಅವರನ್ನೊಳಗೊಂಡ 27 ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆಗೊಂಡಿದ್ದಾರೆ. ಮುಂದೆ ನಡೆಯುವ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆರಿಸಲಾಗುವುದೆಂದು ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖತರ್ ರಹೀಮ್ ಸಅದಿ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

✍️ ಖತರ್ ರಹೀಮ್ ಸಅದಿ