janadhvani

Kannada Online News Paper

ಕುವೈಟ್: ಬಕ್ರೀದ್ ಹಬ್ಬಕ್ಕೆ ಒಂಬತ್ತು ದಿವಸಗಳ ಸಾರ್ವಜನಿಕ ರಜೆ

ಕುವೈತ್ ನಗರ: ಈದ್ ಅಲ್-ಅದ್ಹಾ (ಬಕ್ರೀದ್) ಹಬ್ಬಕ್ಕೆ ಐದು ಪ್ರವೃತ್ತಿ ದಿನಗಳು ಸೇರಿ ವಾರಾಂತ್ಯ ರಜೆಗಳೊಂದಿಗೆ ಒಂಬತ್ತು ದಿವಸಗಳ ಸಾರ್ವಜನಿಕ ರಜಾದಿನವನ್ನು ಸರಕಾರಿ ಘೋಷಿಸಿರುವುದಾಗಿ ಸ್ಥಳೀಯ ಸುದ್ದಿವಾಹಿನಿಗಳು ವರದಿಮಾಡಿದೆ.

ಆಗಸ್ಟ್ 12 ರವಿವಾರದಂದು ದಿಲ್ಹಜ್ 1 ಆಗಲಿದ್ದರೆ, 20ನೇ ಸೋಮವಾರದಂದು ಅರಫಾ ಮತ್ತು ಮಂಗಳವಾರ ಪ್ರಥಮ ಹಬ್ಬದ ದಿನವಾಗಲಿದೆ. ಈ ಕಾರಣಕ್ಕಾಗಿ, ಆಗಸ್ಟ್ 17ನೇ ಶುಕ್ರವಾರದಿಂದ ಒಂಭತ್ತು ದಿನಗಳ ಆಗಸ್ಟ್ 25 ಶನಿವಾರದವರೆಗೆ ಬಕ್ರೀದ್ ರಜೆ ದೊರಕಲಿದೆ.

ಆಗಸ್ಟ್ 13 ರಂದು ಸೊಮವಾರ ದುಲ್ಹಜ್ ಒಂದಾದದರೆ ಆಗಸ್ಟ್ 21 ಮಂಗಳವಾರ ಅರಫ ದಿನ ಮತ್ತು 22 ನೇ ಬುಧವಾರದಂದು ಬಕ್ರೀದ್ ಆಗಲಿದೆ.ಹಾಗಾದರೆ ಆಗಸ್ಟ್ 21 ರಿಂದ 25 ರವರೆಗೆ ಸಾರ್ವಜನಿಕ ರಜಾದಿನವಾಗಿರುತ್ತದೆ. ಆದರೆ ಆಗಸ್ಟ್ 17 ರಿಂದ 25 ರವರೆಗೆ ಒಂಭತ್ತು ದಿನಗಳ ರಜೆಗೆ ಹೆಚ್ಚಿನ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !! Not allowed copy content from janadhvani.com