janadhvani

Kannada Online News Paper

ಅಲ್ ಐನ್‌ನಲ್ಲಿ ಇನ್ನಷ್ಟು ಪಾರ್ಕಿಂಗ್ ಕೇಂದ್ರಗಳು

ಅಲ್ ಐನ್: ಅಲ್ ಐನ್ ಪುರಸಭೆಯು, ಹೊಸದಾಗಿ ಅಲ್ ಐನ್‌ನ ವಿವಿಧ ಭಾಗಗಳಲ್ಲಿ 4,397 ಮೇಲ್ಮೈ ಪಾರ್ಕಿಂಗ್ ತಾಣಗಳನ್ನು ನಿರ್ಮಿಸಿರುವುದಾಗಿ ತಿಳಿಸಿದೆ.

ರಸ್ತೆ ಸುರಕ್ಷತೆಯ ಭಾಗವಾಗಿ ಸೆಂಟರ್ 3 ಹಾಯ್ ಅಲ್ ಖಸರ್, ವಲಯ 4 ನಾದ್ ಅಲ್ ರುಸಾಸ್, ವಲಯ 9 ಹಾಯ್ ಅಲ್ ಮದೀಫ್, ವಲಯ 12 ಹಾಯ್ ಅಲ್ ಮುರಬ್ಬದಲ್ಲಿ ಜುಲೈ 8ರಿಂದ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಪುರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೆಕ್ಟರ್ 3ರ ಹಾಯ್ ಅಲ್ ಖಸರಿನ ಉತ್ತರದ ಖಲೀಫಾ ಬಿನ್ ಝಾಯಿದ್ ಸ್ಟ್ರೀಟ್, ಝಾಹಿದ್ ಬಿನ್ ಸುಲ್ತಾನ್ ಸ್ಟ್ರೀಟ್, ದಕ್ಷಿಣದ ಹಸಾ ಬಿಂತ್ ಮಹಾಮಿದ್ ಸ್ಟ್ರೀಟ್,ಪಶ್ಚಿಮ ಭಾಗದ ಮುಹಮ್ಮದ್ ಬಿನ್ ಖಲೀಫಾ ಸ್ಟ್ರೀಟ್  ಮುಂತಾದ ಭಾಗದಲ್ಲಿ ಮೂರು ಕೇಂದ್ರಗಳಲ್ಲಿ 242 ಉನ್ನತ ಮಟ್ಟದ ಪಾರ್ಕಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೆಕ್ಟರ್ 4 ಹಾಯ್ ಅಲ್ ಖಲಾದಲ್ಲಿ 1,584 ಉನ್ನತ ಪಾರ್ಕಿಂಗ್ ತಾಣಗಳನ್ನು ತಯಾರಿಸಲಾಗಿದೆ.

ಪ್ರದೇಶದ ಗಡಿಯಾಗಿ ಝಾಹಿದ್ ಬಿನ್ ಸುಲ್ತಾನ್ ಸ್ಟ್ರೀಟ್ ಉತ್ತರ ಭಾಗವನ್ನು ಮತ್ತು ಅಲ್ ಸುಲ್ತಾನ್ ಬಿನ್ ಝಾಹಿದ್ ಫಸ್ಟ್ ಸ್ಟ್ರೀಟ್, ಪೂರ್ವದಲ್ಲಿ ಬಿಂತ್ ಮುಹಮ್ಮದ್ ಬಿನ್ ಖಲೀಫಾ ಸ್ಟ್ರೀಟ್ ‌ಗಳನ್ನು ಗುರುತಿಸಲಾಗಿದೆ. ವಲಯ 5 ನಾದ್ ಅಲ್ ರುಸಾಸ್, ಉತ್ತರಕ್ಕೆ ಸಖ್ಬೂತ್ ಬಿನ್ ಸುಲ್ತಾನ್ ಸ್ಟ್ರೀಟ್, ಅಲಿ ಬಿನ್ ಅಬಿ ತಾಲಿಬ್ ಸ್ಟ್ರೀಟ್ ದಕ್ಷಿಣ, ಮತ್ತು ಪೂರ್ವದಲ್ಲಿ ಅಬೂಬಕರ್ ಅಲ್ ಸಿದ್ದೀಕ್ ಸ್ಟ್ರೀಟ್, ಪಶ್ಚಿಮ ಬಿಂತ್ ಹಸ್ಸಾ ಸ್ಟ್ರೀಟ್‌ನ್ನು ಗುರುತಿಸಲಾಗಿದ್ದು, ಇಲ್ಲಿ 682 ಪಾರ್ಕಿಂಗ್ ತಾಣಗಳನ್ನು ನಿರ್ಮಿಸಲಾಗಿವೆ.

ಇವುಗಳಲ್ಲಿ, 462 ಉನ್ನತ ಪಾರ್ಕಿಂಗ್ ಕೇಂದ್ರಗಳು ಮತ್ತು 212 ಪ್ರೀಮಿಯಂ ಪಾರ್ಕಿಂಗ್ ಕೇಂದ್ರಗಳು. ಸೆಕ್ಟರ್ 9 ರಲ್ಲಿ ಹಾಯ್ ಅಲ್ ಮಹ್ದಿಫಿಫ್ನಲ್ಲಿ 657 ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸಲಾಗಿವೆ. ಈ ಪೈಕಿ 590 ಉನ್ನತ ಪಾರ್ಕಿಂಗ್ ಗಳು, 54 ಪ್ರೀಮಿಯಂ ಪಾರ್ಕಿಂಗ್ ಸ್ಥಳಾವಕಾಶಗಳನ್ನು, ಪಾರ್ಕಿಂಗ್ ಪ್ರದೇಶಗಳಲ್ಲಿ ಮತ್ತು ಎಂಟು ಕೇಂದ್ರಗಳಲ್ಲಿ ವಿಶೇಷ ವಿಭಾಗಗಳಿಗಿ ನಿರ್ಮಿಸಲಾದ ಪಾರ್ಕಿಂಗ್ ಸೇರಿದಂತೆ,
ಸೆಕ್ಟರ್ 12 ಹಾಯ್ ಅಲ್ ಮುರಬ್ಬದಲ್ಲಿ 1232 ಪಾರ್ಕಿಂಗ್‌ಗಳ ಪೈಕಿ 1168 ಉನ್ನತ ಪಾರ್ಕಿಂಗ್ ಕೇಂದ್ರಗಳಾಗಿರುತ್ತದೆ.

error: Content is protected !! Not allowed copy content from janadhvani.com