janadhvani

Kannada Online News Paper

ಅಬುಧಾಬಿ ಪೆಟ್ರೋಲ್ ಬಂಕ್‌ ಗಳಲ್ಲಿ 10 ದಿರ್ಹಂ ಸೇವಾ ಶುಲ್ಕ-ಜೂ.30ರಿಂದ ಜಾರಿ

ಅಬುಧಾಬಿ ∙ ಪೆಟ್ರೋಲ್ ತುಂಬಿಸಲು ಬಂಕ್‌ಗೆ ಹೋಗುವವರು ಈ ತಿಂಗಳ 30 ರಿಂದ 10 ದಿರ್ಹಂ ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ. ಅಡ್ನಾಕ್ ಪೆಟ್ರೋಲ್ ಬಂಕ್‌ಗಳಲ್ಲಿ ಸ್ವತಹ ಪೆಟ್ರೋಲ್ ತುಂಬಿಸದಿದ್ದಲ್ಲಿ ಸೇವಾ ಶುಲ್ಕವಾಗಿ 10 ದಿರ್ಹಂ ಪಾವತಿಸಬೇಕಾಗುತ್ತದೆ ಎಂದು  ಆಡ್ನಾಕ್ ಡಿಸ್ಟ್ರಿಬ್ಯೂಷನ್ ಘೋಷಿಸಿದೆ. ಆದರೆ ಇದು ಹಿರಿಯ ವ್ಯಕ್ತಿಗಳಿಗೆ ಮತ್ತು ವಿಕಲಾಂಗರಿಗೆ ಅನ್ವಯಿಸುವುದಿಲ್ಲ.ಕಳೆದ ವರ್ಷದ ಏಪ್ರಿಲ್ ಮಧ್ಯದಲ್ಲಿ, ಅಬುಧಾಬಿಯಲ್ಲಿ ಅಡ್ನಾಕ್ ಪಂಪ್ ಗಳಲ್ಲಿ ಸಣ್ಣ ಪಾವತಿಗೆ ಪ್ರೀಮಿಯಂ ಸರ್ವೀಸನ್ನು ನೀಡಲಾಗಿತ್ತು.

ಪೆಟ್ರೋಲ್ ಅನ್ನು ಹೇಗೆ ತುಂಬಿಸಬೇಕು ಎಂಬುದನ್ನು ಬಂಕ್ ಗಳಲ್ಲಿ ತೋರಿಸಿ ಕೊಡಲಾಗುತ್ತದೆ.ಹೊಸ ವ್ಯವಸ್ಥೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತ ಏಪ್ರಿಲ್ 30 ರಿಂದ ಅಬುಧಾಬಿದಲ್ಲಿ ಪ್ರಾರಂಭವಾಗುತ್ತದೆ. ಉತ್ತರ ಎಮಿರೇಟ್ ಮತ್ತು ಇತರ ಎಮಿರೇಟ್ಗಳಲ್ಲಿ ಎರಡನೆಯ ಹಂತದಲ್ಲಿ ಪರಿಚಯಿಸಲಾಗುವುದು ಎಂದು ಅಡ್ನಾಕ್ ವಿತರಣಾ ಆಕ್ಟಿಂಗ್ ಸಿಇಒ ಸ‌ಈದ್ ಮುಬಾರಕ್ ಅಲ್ ರಶೀದಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com