janadhvani

Kannada Online News Paper

ಕುಟುಂಬಗಳು ವಾಸವಿರುವ ವಸತಿ ಸಮುಚ್ಚಯಗಳಲ್ಲಿ ಅವಿವಾಹಿತರಿಗೆ ನಿಷೇಧ

ಕುವೈಟ್ ಸಿಟಿ: ಕುಟುಂಬಗಳು ವಾಸವಿರುವ ವಸತಿ ಸಮುಚ್ಚಯಗಳಲ್ಲಿ ಅವಿವಾಹಿತರು ವಾಸಿಸುವುದನ್ನು ನಿಷೇಧಿಸಲಾಗಿರುವುದಾಗಿ ಕುವೈತ್ ಮುನಿಸಿಪಾಲಿಟಿಯು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.

ಅವಿವಾಹಿತರು ವಾಸವಿದ್ದಲ್ಲಿ ತಕ್ಷಣ ಅವರನ್ನು ಸ್ಥಳಾಂತರಿಸುವಂತೆ ಮುನಿಸಿಪಾಲಿಟಿ ನಿರ್ದೇಶನ ನೀಡಿದೆ ಎಂದು ಕೌನ್ಸಿಲ್ ಸದಸ್ಯ ಮುಹಮ್ಮದ್ ಅಲ್ ರಾಖಿಬ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕುವೈಟ್ ಕುಟುಂಬಗಳ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತ್ಯೇಕವಾಗಿ ಎಚ್ಚರಿಸಲಾದೆ.

ಆದಾಗ್ಯೂ ಪ್ರಸ್ತುತ ಭದ್ರತಾ ಬೆದರಿಕೆಗಳನ್ನು ಅಧಿಕಾರಿಗಳು ಕಡೆಗಣಿಸುವ ಕಾರಣಕ್ಕಾಗಿ ಕುಟುಂಬಗಳು ಇತರ ವಲಯಗಳಿಗೆ ಪಲಾಯನ ಗೈಯ್ಯುವ ಸ್ಥಿತಿ ಎದುರಾಗಿದೆ.

ಕುಟುಂಬಗಳು ವಾಸಿಸುವ ಪ್ರದೇಶಗಳಿಂದ ವಿದೇಶಿ ಅವಿವಾಹಿತರನ್ನು ತಪ್ಪಿಸಲು ಕ್ರಮ ಕೈಗೊಂಡಿರುವುದಾಗಿ ಫರ್ವಾನಿಯಾ ಗವರ್ನರ್ ಶೈಖ್ ಫೈಝಲ್ ಅಲ್ ಹ್ಯುಮೂದ್ ಅಲ್ ಮಾಲಿಖ್ ಅಲ್ ಸಬಾ ತಿಳಿಸಿದ್ದಾರೆ.ಅವರು ವಿವಿಧ ಪ್ರದೇಶಗಳ ಮೇಯರ್ಗಳೊಂದಿಗೆ ನಡೆಸಿದ ಸಭೆಯಲ್ಲಿ  ಈ ವಿಷಯ ತಿಳಿಸಿದರು.

ಪ್ರಸ್ತುತ, 1.4 ಮಿಲಿಯನ್ ಅವಿವಾಹಿತರು ದೇಶದಲ್ಲಿದ್ದಾರೆ. ಇವುಗಳ ಪೈಕಿ 3,16,000 ಸ್ಥಳೀಯ ನಾಗರಿಕರು. ಉಳಿದ ವಿದೇಶೀಯರ ಪೈಕಿ 8,50,000 ಪುರುಷರು, 2,30,000 ಮಹಿಳೆಯರು.ಅವಿವಾಹಿತರ ವಾಸವನ್ನು ಬದಲಾಯಿಸಲು ತುರ್ತು ಸಭೆ ನಡೆಸುವುದಾಗಿ ಗವರ್ನರ್ ಹೇಳಿದರು.ಹಿರಿಯ ಭದ್ರತಾ ಅಧಿಕಾರಿಗಳ ಸಭೆಯಲ್ಲಿ  ಈ ವಿಷಯದಲ್ಲಿ ಚರ್ಚಿಸಲಾಗುವುದು  ಎಂದವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com