ಯುಪಿ,ಬಿಹಾರ ಮಾದರಿಯ ಗುಂಪು ಹಲ್ಲೆ ಮತ್ತು ಕೊಲೆ ಆಗಿರುವುದನ್ನು ಸರಿಯಾದ ಮಾರ್ಗದಲ್ಲಿ ತನಿಖೆ ಮಾಡಿಸುವುದನ್ನು ಬಿಟ್ಟು ,ಬಾಲಿಶ ಹೇಳಿಕೆ ನೀಡಿದ ಗೃಹ ಮಂತ್ರಿಯವರು ಕೂಡಲೇ ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು.ತನಿಖೆಯ ದಿಕ್ಕು ತಪ್ಪಿಸುವಂಥ ಹೇಳಿಕೆ ಸರಿಯಲ್ಲ .ಈಗಾಗಲೇ ಪೊಲೀಸ್ ಇಲಾಖೆ ತನಿಖೆ ಮಾಡಿ 15 ಜನರನ್ನು ಬಂಧಿಸಿ,ಬಾಕಿ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯೋನ್ಮಖರಾಗುವ ಸಮಯದಲ್ಲಿ ಈ ರೀತಿಯ ಹೇಳಿಕೆ ಸರಿಯಲ್ಲ .ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು .
ಜಾತ್ಯತೀತ ಪಕ್ಷದ ಮೇಲೆ ನಂಬಿಕೆ ಇಟ್ಟ ಮತದಾರರ ಭಾವನೆಗೆ ನೋವು ಆಗಬಾರದು.ಜಾತ್ಯತೀತ ಮನೋಭಾವನೆಯುಳ್ಳ ಜನರು ಈ ಬಾರಿ ನಮಗೆ ಅಧಿಕಾರ ಕೊಟ್ಟಿದ್ದಾರೆ ಅನ್ನುವುದನ್ನು ನೆನಪಿಸಿ .ಮುಂದಿನ ದಿನಗಳಲ್ಲಿ ಮತದಾರರ ಬಳಿಗೆ ಹೋಗಲು ಜನಪ್ರಧಿನಿಧಿಗಳಾದ ನಮಗೆ ಕಷ್ಟ ಆಗಬಹುದು ಮತ್ತು ಕಾರ್ಯಕರ್ತರು ಮುಜುಗರಕ್ಕೆ ಒಳಗಾಗಬಹುದು ಅನ್ನುವುದನ್ನು ಅರ್ಥ ಮಾಡಿಕೊಂಡು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು .ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ .
ಸಿರಾಜ್ ಬಜ್ಪೆ .
ಅಧ್ಯಕ್ಷರು :ದ.ಕ.ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ .







