ಮದೀನಾ ಮುನವ್ವರ: ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ ಬಂದ ಹಜ್ಜಜಾಜಿಗಳ ಮೊದಲ ಎರಡು ವಿಮಾನವು ಮದೀನಾ ಮುನವ್ವರದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಝೀಝ್ ಇಂಟರ್ನ್ಯಾಷನಲ್ ಏರ್ಪೋರ್ಟ್ ತಲುಪಿದೆ.ಇಂದು ಭಾರತದ ಹೈದರಾಬಾದ್ ಹಾಗೂ ಲಕ್ನೋ ದಿಂದ 578 ಹಾಜಿಗಳು ಆಗಮಿಸಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಹಜ್ಜ್ ವಾಲೇಂಟಿಯರ್ ಕೋರ್ ನ ಸದಸ್ಯರು ಹಜ್ಜಾಜಿಗಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು.



ಇಂಡಿಯನ್ ಅಂಬಾಸಿಡರ್ ಡಾ ಸುಹೇಲ್ ಅಜಾಝ್ ಖಾನ್, ಇಂಡಿಯನ್ ಕೌನ್ಸಿಲ್ ಜನರಲ್(ಜಿದ್ದಾ) ಫಹದ್ ಅಹ್ಮದ್ ಖಾನ್ ಸುರಿ ಸೇರಿದಂತೆ ಇಂಡಿಯನ್ ಎಂಬಸಿಯ ವಿವಿಧ ಅಧಿಕಾರಿಗಳು ಹಜ್ಜಾಜಿಗಳನ್ನು ಸ್ವಾಗತಿಸಿದರು. ಕೆಸಿಎಫ್ ಹೆಚ್.ವಿ.ಸಿ ಸದಸ್ಯರು ಹಜ್ಜಾಜಿಗಳನ್ನು ಮದೀನಾ ವಿಮಾನ ನಿಲ್ದಾಣ ಹಾಗೂ ಅವರು ತಂಗುವ ಹೋಟೆಲ್ ಗೆ ತೆರಳಿ ಸಹಕರಿಸಿದರು. ಹಾಜಿಗಳಿಗೆ ಹೆಚ್.ವಿ.ಸಿ ವೆಲ್ಕಂ ಕಿಟ್, ಖರ್ಜೂರ ನೀಡಿ ಸತ್ಕರಿಸಿದರು.



ಈ ವೇಳೆ ಮದೀನಾ ಮುನವ್ವರದ ಸಾಂಪ್ರದಾಯಿಕ ಶೈಲಿಯಲ್ಲಿ ಝಂಝಂ ವಿತರಿಸಲಾಯಿತು ಹಾಗೂ ಹಜ್ಜಾಜಿಗಳ ಮೇಲೆ ಹೂವಿನ ಎಸಲುಗಳನ್ನು ಸುರಿಸುವ ಮೂಲಕ ಭವ್ಯವಾಗಿ ಸ್ವಾಗತಿಸಲಾಯಿತು. ಅಶಕ್ತ ಹಜ್ಜಾಜಿಗಳನ್ನು ವೀಲ್ ಚೇರ್ ಮೂಲಕ ಕೆ.ಸಿಎ.ಫ್ ಹೆಚ್.ವಿ.ಸಿ ಕಾರ್ಯಕರ್ತರು ಹೋಟೆಲ್ ತಲುಪಿಸಿದರು. ಇಂದು ರಾತ್ರಿ7.30 ವೇಳೆಗೆ ಮುಂಬೈಯಿಂದ 442ಹಾಜಿಗಳು ಆಗಮಿಸಲಿದ್ದಾರೆ.ರಾಜ್ಯದ 956 ಹಜ್ಜಾಜಿಗಳು ನಾಳೆ ಪವಿತ್ರ ನಗರವಾದ ಮದೀನಾ ಮುನವ್ವರ ತಲುಪಲಿದ್ದು, 378 ಹಾಜಿಗಳು ನಾಳೆ ಬೆಳಗ್ಗಿನ ವೇಳೆ, 289 ಹಾಜಿಗಳು ಮಧ್ಯಾಹ್ನ ವೇಳೆ, ಹಾಗೂ ಸಂಜೆ 289ಹಾಜಿಗಳು ಮದೀನಾ ಮುನವ್ವರ ತಲುಪಲಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ವಾಲೆಂಟಿಯರ್ ಕೋರ್ ಸದಸ್ಯರು ಮಕ್ಕತುಲ್ ಮುಕರ್ರಮ ಹಾಗೂ ಮದೀನಾ ಮುನವ್ವರದಲ್ಲಿ ಹಜ್ಜಾಜಿಗಳಿಗೆ ಸಹಕರಿಸಲು ಸನ್ನಧ್ಧರಾಗಿದ್ದಾರೆ.
ವರದಿ : ಹಕೀಂ ಬೋಳಾರ್
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ