ಸವಣೂರು: ಕಳೆದ ಇಪ್ಪತ್ತೈದು ವರ್ಷಗಳಿಂದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಇಜಾಝತ್ ಪ್ರಕಾರ ಚೆನ್ನಾವರ ಶಾಖಾ ಸುನ್ನೀ ಸಂಘಟನೆಗಳ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮಾಸಿಕ ದ್ಸಿಕ್ರ್ ಹಲ್ಕಾ ವು ಕರ್ನಾಟಕ ಮುಸ್ಲಿಂ ಜಮಾಅತ್ ಚೆನ್ನಾವರ ಶಾಖಾಧ್ಯಕ್ಷ ಅಬ್ದುಲ್ ಕರೀಂ ಹಾಜಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ರವರು ಉದ್ಘಾಟಿಸಿ ದ್ಸಿಕ್ರ್ ಹಲ್ಕಾದ ನಾಯಕತ್ವ ವಹಿಸಿದರು. ಮದೀನತುಲ್ ಉಲೂಮ್ ದರ್ಸ್ ಆಕಿನಶ್ಶೇರಿ ಮುದರ್ರೀಸ್ , ಹುಬ್ಬುಲ್ ಹಬೀಬ್ ಆನ್ಲೈಲ್ ಕಾರ್ಯಕ್ರಮದ ರುವಾರಿ ವಿದ್ವಾಂಸ ಹಾಫಿಳ್ ಇಲ್ಯಾಸ್ ಸಖಾಫಿ ಮಾಡನ್ನೂರು ರವರು ಉದ್ಭೋದನಾ ಪ್ರಭಾಷಣ ನಡೆಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸುತ್ತೋಲೆಯಂತೆ ಮಾದಕ ದ್ರವ್ಯಗಳ ವಿರುದ್ಧ ಎಂಬ ಕಾರ್ಯಕ್ರಮವು ಇದರೋಂದಿಗೆ ನಡೆಸಲಾಯಿತು. ಹಾಫಿಳ್ ಮಶ್ಹೂದ್ ಪ್ರತೀಜ್ಜೆಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಸಿಪಿ ಅಬೂಬಕರ್ ಮದನಿ, ದಅವಾ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ, ಪ್ರದಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಮುಹಮ್ಮದ್ ಅಲಕ್ಕಾಡಿ, ಎಸ್ ವೈಎಸ್ ಅಧ್ಯಕ್ಷ ಮುಹಮ್ಮದ್ ಕುಂಡಡ್ಕ, ಎಸ್ ಎಸ್ ವೈಎಸ್ ಝೋನ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್, ಅಬ್ದುಲ್ ರಹ್ಮಾನ್ ಬಿ , ಅಬ್ದುಲ್ ರಹ್ಮಾನ್ ಮುಕ್ಕೂರು, ಪುತ್ತು ಹಾಜಿ ಬಿಸ್ಮಿಲ್ಲಾ, ಅಬ್ಬಾಸ್ ಎನ್, ಮೀಡಿಯಾ ಅಬ್ದುಲ್ಲ, ಸಹಾಯಿ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಎಸ್ಸೆಸ್ಸೆಫ್ ಅಧ್ಯಕ್ಷ ವಫೀಕ್ ಅಹ್ಮದ್, ಅಮೀನ್ ಮಿಸ್ಬಾಹಿ, ಮಾಡಾವು ಸರ್ಕಲ್ ಎಸ್ ವೈಎಸ್ ನಾಯಕ ಆಸಿಫ್ ಕಟ್ಟತ್ತಾರು, ಎಸ್ ವೈಎಸ್ ಉಪಾಧ್ಯಕ್ಷ ನಾಸಿರ್ ಎಪಿ, ಹಾಫಿಳ್ ಶಫೀಕ್ , ಹಾಫಿಳ್ ತ್ವಾಹಿರ್, ಉಮರ್ ಕೆ, ಇಬ್ರಾಹಿಂ ಮುನಾಝ್ , ಇಸ್ಮಾಯಿಲ್ ಅನ್ವರ್ , ಮುಸ್ತಫ ಸಿಪಿ, ಖಲ್ಲಾದ್ ಮುಈನಿ, ಎಸ್ಸೆಸ್ಸೆಫ್ ಕಾರ್ಯದರ್ಶಿ ಮುಝಮ್ಮಿಲ್, ಆಝಿಮ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ ವೈಎಸ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹನೀಫಿ ಸ್ವಾಗತಿಸಿ , ಕೋಶಾಧಿಕಾರಿ ಮುಹಮ್ಮದ್ ನಸೀರ್ ನಿಝಾಮಿ ರವರು ವಂದಿಸಿದರು.