ಇತಿಹಾಸ ಪ್ರಸಿದ್ಧ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಣ್ಣಂಗಾರ್ ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ) ಮಖಾಂ ಉರೂಸ್ ನಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಆಗಮಿಸಲಿದ್ದಾರೆಂದು ಉರೂಸ್ ಸ್ವಾಗತ ಸಮಿತಿಯ ಚೇರ್ಮಾನ್ ಹಾಜಿ ಗುಲಾಂ ಮುಹಮ್ಮದ್ ಮಾಹಿತಿ ನೀಡಿದ್ದಾರೆ.

ಎಪ್ರಿಲ್ 11ರಿಂರ 19ರವರೆಗೆ ನಡೆಯುವ ಉರೂಸ್ ಸಂಗಮದಲ್ಲಿ ಕುಂಬೋಲ್ ಕೆ.ಎಸ್ ಆಟ್ಟಕ್ಕೋಯ ತಂಙಳ್,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ , ಸಯ್ಯಿದ್ ಮಸ್ಹೂದ್ ತಂಙಳ್ , ಪೇರೋಡ್ ಉಸ್ತಾದ್ , ಡಾ. ಫಾರೂಕ್ ನ ಈಮಿ ,ಸಯ್ಯಿದ್ ಆಟ್ಟೀರಿ ತಂಙಳ್ ,ಸಯ್ಯಿದ್ ಜ ಅಫರ್ ಸ್ವಾದಿಕ್ ತಂಙಳ್ , ಬಾಯಾರ್ ತಂಙಳ್ , ಜಲಾಲುದ್ದೀನ್ ತಂಙಳ್ ಹಲವು ಸಯ್ಯಿದ್ ಗಳು ,ಉಲಮಾ ಗಳು ವಿವಿಧ ದಿನಗಳಲ್ಲಿ ನಾಯಕತ್ವ ನೀಡಲಿದ್ದಾರೆ.
19ನೇ ತಾರೀಖು ಸಮಾಪ್ತಿ ದಿನದಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ, ಸಯ್ಯಿದ್ ಖಲೀಲ್ ತಂಙಳ್ ನಾಯಕತ್ವ ನೀಡಲಿದ್ದು , ಮೌಲಾನಾ ಶಾಫಿ ಸಅದಿ ಬೆಂಗಳೂರು ಮುಖ್ಯ ಭಾಷಣ ಮಾಡಲಿದ್ದಾರೆ. ಸಯ್ಯಿದ್ ತ್ವಾಹ ತಂಙಳ್ ಬುರ್ಧಾವು ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಸಚಿವರಾದ ಬಿ.ಝಡ್ ಜಮೀರ್ ಅಹಮ್ಮದ್, ಸ್ಪೀಕರ್ ಯುಟಿ ಖಾದರ್ , ಐವನ್ ಡಿಸೋಜಾ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಹಲವು ರಾಜಕೀಯ ,ಸಾಮಾಜಿಕ , ಧಾರ್ಮಿಕ ಧುರೀಣರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.







