ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ಸಮಿತಿಯಿಂದ ಜಿಲ್ಲಾ ವಾರ್ಷಿಕ ಕೌನ್ಸಿಲ್ ಹಾಗೂ ಜಿಲ್ಲಾ ಕ್ಯಾಂಪ್ ಎಸ್.ವೈ.ಎಸ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕೆರೆರವರ ಅಧ್ಯಕ್ಷತೆಯಲ್ಲಿ ತಾಜುಲ್ ಫುಖಹಾಅ್ ನಗರ ಮರಿಕ್ಕಳದಲ್ಲಿ ನಡೆಯಿತು.
ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಸಭೆಯನ್ನು ಉದ್ಘಾಟಿಸಿದರು. ತ್ವಾಹಿರ್ ಸಖಾಫಿ ಮಂಜೇರಿ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ಮಂಡಿಸಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ಮರಿಕ್ಕಳ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಮೋಂಟುಗೋಳಿ, ರಾಜ್ಯ ಸೆಲೆಕ್ಷನ್ ಸಮಿತಿ ಚೇರ್ಮೇನ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ರಾಜ್ಯ ನಾಯಕರಾದ ಖಲೀಲ್ ಮಾಲಿಕಿ ಬೋಳಂತೂರು, ಮುಹಮ್ಮದಲಿ ಸಖಾಫಿ ಅಶ್-ಅರಿಯ್ಯ, ಬಶೀರ್ ಮದನಿ ಕೂಳೂರು, ಆಸಿಫ್ ಹಾಜಿ ಕೃಷ್ಣಾಪುರ ಇನ್ನಿತರರು ಹಾಜರಿದ್ದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ಮೆಹಬೂಬ್ ಸಖಾಫಿ ಕಿನ್ಯ, ಪ್ರಧಾನ ಕಾರ್ಯದರ್ಶಿ – ಇಸ್ಮಾಈಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿ – ಅಬ್ದುರ್ರಝಾಕ್ ಭಾರತ್, ಸಂಘಟನಾ ಉಪಾಧ್ಯಕ್ಷರಾಗಿ ತೌಸೀಫ್ ಸಅದಿ ಹರೇಕಳ ಬದ್ರುದ್ದೀನ್ ಅಝ್ಹರಿ ಕೈಕಂಬ (ದಅ್‌ವಾ & ಟ್ರೈನಿಂಗ್), ಹಾಫಿಳ್ ಯಾಕೂಬ್ ಸಅದಿ (ಸಾಂತ್ವನ & ಇಸಾಬಾ), ನವಾಝ್ ಸಖಾಫಿ ಅಡ್ಯಾರ್‌ಪದವು (ಸೋಷಿಯಲ್ & ಕಲ್ಚರಲ್), ನಝೀರ್ ಹಾಜಿ ಲೂಲೂ (ಮೀಡಿಯಾ & ಐಟಿ), ಕಾರ್ಯದರ್ಶಿಗಳಾಗಿ ಮುತ್ತಲಿಬ್ ಮೂಡಬಿದ್ರೆ (ಸಂಘಟನೆ), ಮಹ್ಮೂದ್ ಸಅದಿ (ದಅ್‌ವಾ & ಟ್ರೈನಿಂಗ್), ಫಾರೂಕ್ ಶೇಡಿಗುರಿ (ಸಾಂತ್ವನ & ಇಸಾಬಾ), ಖಾಲಿದ್ ಹಾಜಿ ಭಟ್ಕಳ (ಸೋಷಿಯಲ್ & ಕಲ್ಚರಲ್), ಹಸನ್ ಪಾಂಡೇಶ್ವರ (ಮೀಡಿಯಾ & ಐಟಿ) ಹಾಗೂ ರಾಜ್ಯ ಕೌನ್ಸಿಲರ್ ಗಳಾಗಿ 21 ಮಂದಿ ಆಯ್ಕೆಯಾದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪ್ರಿಂಟೆಕ್ ಸ್ವಾಗತಿಸಿ, ಜಿಲ್ಲಾ ನೂತನ ಕೋಶಾಧಿಕಾರಿ ಅಬ್ದುರ್ರಝಾಕ್ ಭಾರತ್ ಧನ್ಯವಾದಗೈದರು.