ನಾವುಂದ: ಇಸ್ಲಾಮಿಕ್ ಎಜ್ಯುಕೇಷನಲ್ ಬೋರ್ಡು ಆಫ್ ಇಂಡಿಯಾ ಇದರ ಅಂಗಿಕಾರದೊಂದಿಗೆ ಕಾರ್ಯಾಚರಿಸುತ್ತಿರುವ ನಾವುಂದ – ಕೋಯನಗರ ಬುಸ್ತಾನುಲ್ ಉಲೂಂ ಮದ್ರಸ ಪ್ರಾರಂಭೋತ್ಸವ “ಫತ್’ಹೇ ಮುಬಾರಕ್ -2018” ಕಾರ್ಯಕ್ರಮವು ಜೂನ್ 24ನೇ ಆದಿತ್ಯವಾರ ಸಂಜೆ ಬಹಳ ವಿಜೃಂಭಣೆಯಿಂದ ನಡೆಯಿತು.ಮಗರಿಬ್ ನಮಾಝಿನ ಬಳಿಕ ಮದ್ರಸ ಸಭಾಂಗಣದಲ್ಲಿ ನಡೆದ ಸದ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಯನಗರ ಮೊಹಲ್ಲಾ ನಿಕಟ ಪೂರ್ವ ಅಧ್ಯಕ್ಷ ಅಬ್ಬಾಸ್ ಹಾಜಿ ವಹಿಸಿದರು. ಕಾರ್ಯಕ್ರಮವನ್ನು ಸ್ಥಳೀಯ ಮುಖ್ಯೋಪಾಧ್ಯಾಯರಾದ ಕೊಂಬಾಳಿ ಕೆ.ಎಂ.ಎಚ್. ಝುಹುರಿ ಉದ್ಘಾಟಿಸಿ, ಫತ್’ಹೇ ಮುಬಾರಕ್ ಬಗ್ಗೆ ವಿವರಿಸಿದರು. ಅಧ್ಯಾಪಕರಾದ ಮುನೀರ್ ಸಖಾಫಿ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬದ್’ರುಲ್ ಹುದಾ ವೆಲ್ಫೇರ್ ಸಂಘದ ಪ್ರತಿನಿಧಿಯಾಗಿ ಇಖ್ಬಾಲ್ ದಾರಿಮಿ ಮಾತನಾಡಿ ಶುಭಹಾರೈಸಿದರು.
ಕೋಯನಗರ ಮೊಹಲ್ಲಾ ನಿಕಟ ಪೂರ್ವ ಅಧ್ಯಕ್ಷರಾದ ಮುಹಮ್ಮದ್ ಹಾಜಿ, ಮಾಜಿ ಕಾರ್ಯದರ್ಶಿ ಯೂಸುಫ್ ಹಾಜಿ, ಮೊಹಲ್ಲಾ ಸಮಿತಿ ಸದಸ್ಯ ಹಮೀದ್ ಮುಸ್ಲಿಯಾರ್, ಬದ್’ರುಲ್ ವೆಲ್ಫೇರ್ ಸಮಿತಿ ಅಧ್ಯಕ್ಷ ಮುಲ್ಲಾ ಸಮೀರ್, ಹಂಝ WFK, ಹಾಗೂ
ಊರಿನ ಹಿರಿಯ ಮುಖಂಡರು, ಜಮಾಅತ್ ಕಮಿಟಿ ನಾಯಕರು, ಬದ್’ರುಲ್ ಹುದಾ ವೆಲ್ಫೇರ್ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಬದ್’ರ್ ಮೌಲೀದ್ ಪಾರಾಯಣ ಗೈದು, ವಿಶೇಷ ತಬರ್ರುಖ್ ವಿತರಿಸಲಾಯಿತು. ಮೊಹಲ್ಲಾ ಕಮಿಟಿ ಪ್ರ.ಕಾರ್ಯದರ್ಶಿ ಅಡ್ವಕೇಟ್ ಕೆ.ಎಂ. ಇಲ್ಯಾಸ್ ನಾವುಂದ ಸ್ವಾಗತಿಸಿ, ವಂದಿಸಿದರು.